ತೀರ್ಥಹಳ್ಳಿ : ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ  ವಿಠಲನಗರದ ಗಂಗಮ್ಮ ( 80 ವರ್ಷ ) ಎಂಬುವ ವೃದ್ದೆ ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 ಕುಟುಂಬಸ್ಥರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮನೆಯ ಹಿಂಭಾಗ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿರುವ ಘಟನೆ ನೆಡೆದಿದೆ.
ಅಕ್ಕ ಪಕ್ಕದಲ್ಲಿರುವ ಜನರಿಗೆ ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ  ಅಳಲನ್ನು ಹೇಳಿಕೊಳ್ಳುತ್ತಿದ್ದರು  ಎನ್ನಲಾಗಿದೆ. 
ಮೃತರಿಗೆ ಇಬ್ಬರು ಗಂಡು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. 
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
		 
                         
                         
                         
                         
                         
                         
                         
                         
                         
                        