ಮನೆಯ ಹತ್ತಿರ ಜೋರಾಗಿ ಕೂಗಿದ ವಿಚಾರದಲ್ಲಿ ವ್ಯಕ್ತಿಯೋರ್ವನ ಮೇಲೆ ಮೂವರು ಸೇರಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಘಟನೆಯ ಹಿನ್ನಲೆ :
ತುಂಗ ನಗರದ ನಿವಾಸಿ ವಿನೋದ್ ಎಂಬ ವ್ಯಕ್ತಿ ತನ್ನ ಶಂಕರ್ ಎಂಬಾತನನ್ನು ಮಾತನಾಡಿಸಿಕೊಂಡು ಬರಲು ಕುಂಬಾರಗುಡಿಯಲ್ಲಿರುವ ಆತನ ಮನೆಯ ಬಳಿ ಬಂದಿರುತ್ತಾನೆ. ಆದರೆ ಶಂಕರ್ ಮನೆ ಖಾಲಿ ಮಾಡಿಕೊಂಡು ಹೋಗಿ ಆ ಮನೆಗೆ ಬೇರೊಬ್ಬರು ವಾಸಕ್ಕೆ ಬಂದಿರುತ್ತಾರೆ.
ಈ ವಿಷಯ ಅರಿಯದ ವಿನೋದ್ ಶಂಕರ್ ಹೆಸರನ್ನು ಜೋರಾಗಿ ಕೂಗಿದ್ದಾನೆ.ಈ ಸಂಧರ್ಭದಲ್ಲಿ ಆ ಮನೆಯಲ್ಲಿ ಹೊಸದಾಗಿ ಬಾಡಿಗೆ ಬಂದು ವಾಸವಿದ್ದವರು ಹೊರಬಂದು ವಿನೋದ್ ಜೊತೆಗೆ ಮಾತನಾಡಿದ್ದಾರೆ.ಹೀಗೆ ಮಾತನಾಡುತ್ತಿರುವಾಗ ಇಬ್ಬರ ನಡುವೆ ವಾಗ್ಯುದ್ಧಗಳಾಗಿ ವಿಕೋಪಕ್ಕೆ ಹೋಗಿದೆ.
ಈ ಸಂಧರ್ಭದಲ್ಲಿ ವಿನೋದ್ ಮೇಲೆ ಆ ಮನೆಯಲ್ಲಿದ್ದ ಮೂವರು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ ಎಂದು ವಿನೋದ್ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋಡ್ ದಾಸ್ ಎಂಬುವರು ವಿನೋದ್ ಕುಡಿದು ಬಂದು ಮನೆ ಹತ್ತಿರ ಗಲಾಟೆ ನಡೆಸಿದ್ದಾನೆ. ದೊಣ್ಣೆಯಿಂದ ವಿನೋದ್ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ಸಹ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಿಸಿದ್ದಾರೆ.