ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ , ಗೃಹಸಚಿವ ಆರಗ ಜ್ಞಾನೇಂದ್ರರವರು ಸಹ ದೆಹಲಿ ವಿಮಾನ ಹತ್ತಿದ್ದರು. ಇದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೆ, ಆಪ್ತ , ಸಂಘ ಪರಿವಾರ, ಬಿಜೆಪಿ ಮತ್ತು ದೆಹಲಿಯ ಮೂಲಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು.
ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಇದರ ನಡುವೆ, ತಮ್ಮ ಖಾಸಗಿ ಕೆಲಸವೊಂದು ದೆಹಲಿ ಮಟ್ಟದಲ್ಲಿ ಆಗಬೇಕಿದ್ದರಿಂದ ಅದಕ್ಕಾಗಿ ಸಮಯ ಕೇಳಿದ್ದ ಗೃಹಸಚಿವರಿಗೆ ದೆಹಲಿ ನಾಯಕರು ಭೇಟಿಗೆ ಅವಕಾಶ ನೀಡಿದ್ದರಿಂದ ದಿಢೀರ್ ದೆಹಲಿಗೆ ತೆರಳಬೇಕಾಯ್ತು ಎಂಬ ವಿಚಾರವೂ ಇತ್ತು.
ಇದರ ಬಗ್ಗೆ ಮಾತನಾಡಿರುವ ಗೃಹಸಚಿವರು, ನಾನು ದೆಹಲಿಗೆ ಹೋಗಿದ್ದು ಖಾಸಗಿ ಕೆಲಸಕ್ಕಾಗಿ, ಅಲ್ಲಿ ಸಿಎಂ ಬೊಮ್ಮಾಯಿ ರವರು ಇದ್ದರು ಅವರನ್ನ ಭೇಟಿಯಾಗಿದ್ದೇನೆ ಅಷ್ಟೆ. ಆದರೆ ಹೈಕಮಾಂಡ್ ನಾಯಕರನ್ನು, ಪ್ರಹ್ಲಾದ್ ಜೋಶಿ ರವರ ಭೇಟಿ ಮಾಡಿಲ್ಲ. ನಾನು ದೆಹಲಿಗೆ ಹೋಗುವ ಹೊತ್ತಿಗೆ, ಪ್ರಹ್ಲಾದ್ ಜೋಶಿಯವರು ಈ ಕಡೆಗೆ ವಾಪಸ್ ಬರುತ್ತಿದ್ದರು ಎಂದ ಗೃಹಸಚಿವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.