ತೀರ್ಥಹಳ್ಳಿ : ಕಾರು ಹಾಗೂ ಬೈಕ್ ನಡುವಿನ ಅಪಘಾತ ನೆಡಿದಿದ್ದು ಅಪಘಾತ ನೆಡದ ಸ್ಥಳದಲ್ಲಿ ಗಲಾಟೆ ನೆಡೆದು ಆ ಸಂದರ್ಭದಲ್ಲಿ ಚಿನ್ನದ ಸರ ಕಳ್ಳತನ ನೆಡೆದಿರುವ ವಿಚಿತ್ರ ಘಟನೆ ತಾಲೂಕಿನ ಕೋಣಂದೂರು ಸಮೀಪ ನೆಡೆದಿದೆ.
KA – 14 M 4592 ಸಂಖ್ಯೆಯ ಕಾರೊಂದು ಹಿರೇಬೈಲಿನಿಂದ ಹೆಗ್ಗಡಿಗೆರೆಗೆ ಹೋಗುವಾಗ ಮಲ್ಲಿಗೆಕಟ್ಟೆಯಲ್ಲಿ ಬೈಕ್ ಅಡ್ಡ ಬಂದು ಅಪಘಾತವಾಗಿದೆ.
ಕಾರು ಹಾಗೂ ಬೈಕ್ ಚಾಲಕನ ಮಧ್ಯೆ ಗಲಾಟೆ ನೆಡೆಯುವಾಗ ಮೂರನೇ ವ್ಯಕ್ತಿಯೊಬ್ಬ ಬಂದು ಹಲ್ಲೆ ನೆಡೆಸಿ ಕಾರಿನ ಚಾಲಕನ ಕೊರಳಲ್ಲಿ ಇದ್ದ 15 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾನೆ ಎಂದು ಚಾಲಕ ನಿರಂಜನ್ ಆರೋಪಿಸಿದ್ದಾನೆ.
ಕಾರಿನ ಚಾಲಕ ನಿರಂಜನ್ ಎಂಬುವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ಸರಗಳ್ಳತನವಾಗಿರುವ ಬಗ್ಗೆ ಕಾರಿನ ಚಾಲಕ ಸುಮ್ಮನೆ ಕಪೋಕಲ್ಪಿತ ಕಥೆ ಕಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.