Headlines

ಕಾರು ಹಾಗೂ ಗೂಡ್ಸ್ ಆಟೋ ನಡುವೆ ಮುಖಾಮುಖಿ ಡಿಕ್ಕಿ : ಕಾರು ಚಾಲಕ ಸಾವು

ಸಾಗರ ಹೊಸನಗರ ಹೆದ್ದಾರಿಯ ಮಾರುತಿಪುರ ಸಮೀಪ ಕೇಶವಪುರ ಸೇತುವೆ ಬಳಿಯ ತಿರುವಿನಲ್ಲಿ ಗೂಡ್ಸ್ ಆಟೋ ಹಾಗೂ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಚಾಲಕ ಸತೀಶ್ ಕಾಡವಳ್ಳಿ (52) ಸಾವನ್ನಪಿದ್ದಾರೆ.

class=”separator” style=”clear: both; text-align: center;”>



ಅಫಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು,ಓಮಿನಿಯಲ್ಲಿ  ಚಾಲಕರಾದ ಸತೀಶ್ ಕಾಡವಳ್ಳಿ ಪ್ರಯಾಣ ಮಾಡುತ್ತಿದ್ದರು ಹಾಗೂ ಗೂಡ್ಸ್ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿರುವ ವರದಿಯಾಗಿದ್ದು ,ಹೊಸನಗರದಿಂದ ಬಟ್ಟೆಮಲಪ್ಪ ಕಡೆಗೆ ಪ್ರಯಾಣಿಸುತ್ತಿದ್ದರು.


ಮೃತ ಸತೀಶ್ ಕಾಡವಳ್ಳಿ ರವರು ತಾಲೂಕು ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು ಹಾಗೂ ವೀರಶೈವ ಸಮುದಾಯದ ಮುಖಂಡರರಾಗಿಯೂ ಸಹ ಗುರುತಿಸಿಕೊಂಡಿದ್ದರು.

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *