ರಿಪ್ಪನ್ ಪೇಟೆ : ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕೆದಲುಗುಡ್ಡೆ ಗ್ರಾಮದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು ಮೆಸ್ಕಾಂ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಆರೋಪಿಸಿದ್ದಾರೆ
ಕೆದಲು ಗುಡ್ಡೆಯ ಗಣೇಶ್ ಎಂಬುವವರಿಗೆ ಸೇರಿದ ಹಸುವೊಂದು ಮೊನ್ನೆ ಕೆದಲು ಗುಡ್ಡೆ ಗ್ರಾಮದಲ್ಲಿ ಅಳವಡಿಸಿರುವ ಟ್ರಾನ್ಸ್ ಫರ್ಮ್ ಶಾರ್ಟ್ ಸರ್ಕ್ಯೂಟ್ ಆಗಿ ಅರ್ಥಿಂಗ್ ಆಗಿರುವುದರಿಂದ ಮೃತಪಟ್ಟಿದೆ.ಈ ಬಗ್ಗೆ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ರೈತರು ಕಷ್ಟಪಟ್ಟು ಸಾಕಿ ಸಲುಹಿದ ಗೋವುಗಳು ಈ ರೀತಿಯಾಗಿ ಸಾವನ್ನಪ್ಪುತ್ತಿರುವುದು ಖೇದಕರ ಸಂಗತಿಯಾಗಿದೆ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕೇವಲ ಬಿಲ್ ಬಾಕಿ ವಸೂಲಾತಿ ಮತ್ತು ಸಂಬಳ ಹೊರತುಪಡಿಸಿ ಸಿಗುವ ಲಾಭದಾಯಕವಾದ ಜಂಗಲ್ ಕಟ್ಟಿಂಗ್ ಗೆ ಮೀಸಲಾಗಿದ್ದರೆಯೇ ಹೊರತು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಇನ್ನೊಂದು ವಾರದಲ್ಲಿ ಕೆದಲುಗುಡ್ಡೆ ಗ್ರಾಮದ ಟ್ರಾನ್ಸ್ ಫಾರ್ಮರ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ರಿಪ್ಪನ್ ಪೇಟೆ ಮೆಸ್ಕಾಂ ಇಲಾಖೆಯ ಎದುರು ಉಗ್ರವಾದ ಹೋರಾಟ ನಡೆಸಲಾಗುವುದೆಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಮಾಹಿತಿ ನೀಡಿದರೂ ಸ್ಪಂದಿಸಿದ ಮೆಸ್ಕಾಂ ಇಲಾಖೆ :
ಕಳೆದೆರಡು ತಿಂಗಳಲ್ಲಿ ಈ ಟ್ರಾನ್ಸ್ ಫಾರ್ಮರ್ ಸುತ್ತಮುತ್ತ ಜಾನುವಾರುಗಳು ಸಾವನ್ನಪ್ಪುತ್ತಿದ್ದು ಈ ಬಗ್ಗೆ ರಿಪ್ಪನ್ ಪೇಟೆಯ ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅವರು ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕೆದಲುಗುಡ್ಡೆ ಗ್ರಾಮಸ್ಥರಾದ ಗಣೇಶ್ ಆರೋಪಿಸಿದ್ದಾರೆ.
ನರಬಲಿಗೆ ಕಾಯುತ್ತಿದೆಯೋ ಮೆಸ್ಕಾಂ ಇಲಾಖೆ :
ಒಟ್ಟಾರೆಯಾಗಿ ಗೋವುಗಳನ್ನು ಕಷ್ಟಪಟ್ಟು ಸಾಕುವಂತಹ ರೈತರ ಶಾಪ ಜಡ್ಡುಗಟ್ಟಿರುವ ಮೆಸ್ಕಾಂ ಅಧಿಕಾರಿಗಳಿಗೆ ತಟ್ಟದೇ ಬಿಡುವುದಿಲ್ಲ.ಇಂತಹ ಸ್ಥಳಗಳಲಿ ಮನುಷ್ಯರ ಹೆಣ ಬೀಳುವವರೆಗೂ ಬಿಳಿಯಾನೆಯಂತಹ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ..