ಶಿವಮೊಗ್ಗ : ನಾಗರಿಕರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲದಿದ್ದರೂ ನಾಗರಿಕರ ಹಿತಕಾಯುವಲ್ಲಿ ವಿಫಲರಾದರೂ ನಕಲಿ ಹಿಂದುತ್ವದ ಘೋಷಣೆ ಕೂಗುತ್ತಾ ಬಡ ಮುಸ್ಲಿಂ ವ್ಯಾಪಾರಿಗಳನ್ನು ದ್ವೇಷ ಮಾಡಿ, ಅವರ ದಿನನಿತ್ಯದ ಕೂಲಿಯನ್ನು ಕಿತ್ತುಕೊಂಡು ಕಾರ್ಪೊರೇಟ್ ಬಂಡವಾಳಶಾಹಿ ಮುಸ್ಲಿಮರೊಂದಿಗೆ ಕೈಜೋಡಿಸುತ್ತಿರುವ ನಕಲಿ ಹಿಂದುತ್ವವಾದಿಗಳು ಈ ಬಿಜೆಪಿ ಯವರು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿಯಾದ ಯಮುನಾ ರಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕಳೆದವಾರ ನಡೆದ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಮುಸ್ಲಿಮರಿಗೆ ವ್ಯಾಪಾರ ಕೊಡಬಾರದೆಂದು ರೋಷಾವೇಷ ತೋರಿದ್ದ ಬಿಜೆಪಿ ನಾಯಕರುಗಳು ಇಂದು ಶಿವಮೊಗ್ಗದ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ನಲ್ಲಿ ದಕ್ಷಿಣಕನ್ನಡದ ಮುಸ್ಲಿಂ ಉದ್ಯಮಿಯಾಗಿರುವ ಸಿದ್ದಿಕ್ ಬ್ಯಾರಿರವರಿಂದ ನಿರ್ಮಾಣಗೊಂಡಿರುವ ಬಿಫನ್ ಇಂಡೋರ್ ಗೇಮ್ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ಇವರ ಒಂದು ನಾಟಕೀಯ ಹಿಂದುತ್ವಕ್ಕೆ ಸಾಕ್ಷಿಯಾಗಿದೆ.
ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಎಲ್ಲ ಧರ್ಮ ಜನಾಂಗದವರು ಸಮನ್ವಯತೆಯಿಂದ ಇದುವರೆಗೂ ಬದುಕುತ್ತಿದ್ದು ಆಡಳಿತ ಪಕ್ಷವಾದ ಬಿಜೆಪಿಯು ಜನರಿಗೆ ಯಾವುದೇ ಉತ್ತಮ ಆಡಳಿತ ಕೂಡಲು ವಿಫಲರಾಗಿದ್ದಾರೆ.
ಈ ನಿಟ್ಟಿನಲ್ಲಿ ಕೇವಲ ಮುಂದಿನ ವರ್ಷದ ಚುನಾವಣೆ ತಯಾರಿಗೋಸ್ಕರ ಜನರ ಭಾವೈಕ್ಯತೆಯನ್ನು ಹಾಳುಮಾಡಿ ಜನಗಳ ಮಧ್ಯೆ ಕೋಮುದ್ವೇಷವನ್ನು ಹಾಕುತ್ತಿರುವುದು ಅತ್ಯಂತ ಖಂಡನೀಯವಾಗಿದೆ.
ಕೇವಲ 33 ವರ್ಷಕ್ಕೆ ಲೀಸ್ ಗೆ ಪಡೆದಿರುವ ಇದೇ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ಅನ್ನು ಅವರಿಗೆ 99 ವರ್ಷ ಲೀಸ್ ಗೆ ಕೊಡಲು (ಬಹುತೇಕ ಮಾರಾಟ ಮಾಡಲು) ಹೊರಟಿದ್ದು ಇದೇ ಹಿಂದುತ್ವದ ಮೇಲೆ ಮತ ಕೇಳುವಂತಹ ಬಿಜೆಪಿ ಆಡಳಿತ ಪಕ್ಷ ಎನ್ನುವ ವಿಷಯವನ್ನು ನಾಗರಿಕರು ಮರೆಯಬಾರದು.
ಹಾಗಾದರೆ ಇವರ ಹಿಂದುತ್ವ ಕೇವಲ ಬಡ ಬೀದಿ ಬದಿಯ ವ್ಯಾಪಾರಿಗಳ ಮೇಲೆ ಮಾತ್ರವೇ ಏಕೆ ದೊಡ್ಡ ದೊಡ್ಡ ಬಂಡವಾಳಶಾಹಿಗಳ ತಮ್ಮ ಲಾಭಕ್ಕಾಗಿ ಕೈ ಜೋಡಿಸುವಾಗ ಹಿಂದುತ್ವ ಮಾಯವಾಗುತ್ತದೆ. ಜನ ಸಾಮಾನ್ಯರು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಆದ್ದರಿಂದ ಈ ನಕಲಿ ಹಿಂದುತ್ವದ ವನ್ನು ಬಿಟ್ಟು ಸಂಕಷ್ಟದಲ್ಲಿರುವ ಜನತೆಗೆ ಉತ್ತಮ ಆಡಳಿತ ಕೊಡುವ ಬಗ್ಗೆ ಗಮನಹರಿಸಿಬೇಕಾಗಿ ಎಚ್ಚರಿಕೆ ನೀಡುತ್ತಿದ್ದೇವೆ.
ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ರೀತಿ ಕೋಮುಗಲಭೆಯಿಂದ ಸಾಮಾನ್ಯ ನಾಗರಿಕರಿಗೆ ಪ್ರತಿನಿತ್ಯ ತೊಂದರೆ ಉಂಟಾಗುತ್ತಿದ್ದು ಜನರು ಶಾಂತಿ ಸಮನ್ವಯತೆಯಿಂದ ಜೀವನ ನಡೆಸುವ ನಿಟ್ಟಿನಲ್ಲಿ ಎಲ್ಲರು ಕೈಜೋಡಿಸಬೇಕಾಗಿದೆ.
ಪ್ರಸ್ತುತ ನಮ್ಮ ದೇಶದಲ್ಲಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ತೆರಿಗೆ ದರ ಪೆಟ್ರೋಲ್ ದರ ದಿನನಿತ್ಯ ಬಳಕೆ ಮಾಡುವ ಸಾಮಗ್ರಿಗಳ ದರ ಕುಡಿಯುವ ನೀರಿನ ಸಮಸ್ಯೆ ನಿರುದ್ಯೋಗದ ಸಮಸ್ಯೆ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಡಳಿತವಕ್ತ ಕಾರ್ಯಪ್ರವೃತ್ತರಾಗಬೇಕು. ಈ ರೀತಿ ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಕೋಮುಗಲಭೆ ಮಾಡುವುದನ್ನು ನಿಲ್ಲಿಸಬೇಕೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದಿದ್ದಾರೆ.