Headlines

ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ವಿದ್ಯಾರ್ಥಿಯ ಕೈಯನ್ನು ಕಚ್ಚಿದ ಉಪನ್ಯಾಸಕ;

ಹೊಸನಗರ :  ಪರೀಕ್ಷೆಯಲ್ಲಿ ನಕಲು ಮಾಡಿದ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಕೈಯನ್ನು ಉಪನ್ಯಾಸಕನೊಬ್ಬರು ಕಚ್ಚಿರುವ ಘಟನೆ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ನಡೆದಿದೆ.

ಅಂತಿಮ ಬಿಎ ಪದವಿ ಓದುತ್ತಿರುವ ಕೀರ್ತೇಶ್ ಎಂಬ ವಿದ್ಯಾರ್ಥಿ  ಇಂದು ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಪರೀಕ್ಷಾ ಮೇಲ್ವಿಚಾರಕರಾದ ಅಂಜನ್ ಕುಮಾರ್ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಅಂಜನ್ ಕುಮಾರ್ ಪ್ರಯತ್ನಿಸಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿ ಕೀರ್ತೆಶ್ ಪರೀಕ್ಷಾ ಮೇಲ್ವಿಚಾರಕ  ಅಂಜನ್ ಕುಮಾರ್ ರವರಿಗೆ ಉಡಾಫೆ ಉತ್ತರಗಳನ್ನು ನೀಡಿದ  ಎನ್ನಲಾಗುತ್ತಿದೆ.

ಇದರಿಂದ ಸಿಟ್ಟಿಗೆದ್ದ ಪರೀಕ್ಷಾ ಮೆಲ್ವಿಚಾರಕರಾದ ಅಂಜನ್ ಕುಮಾರ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ಕೈಯನ್ನು ಕಚ್ಚಿದ್ದಾರೆ ಎಂದು ಆರೋಪಿಸಿ  ವಿದ್ಯಾರ್ಥಿಯು ಹೊಸನಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಪೋಲಿಸರಿಗೆ  ದೂರು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ.


ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ 

About The Author

Leave a Reply

Your email address will not be published. Required fields are marked *