ಹೊಸನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಹೆಸರಾಂತ ಖಾಸಗಿ ಹೋಟೆಲ್ನಲ್ಲಿ ಇಂದು ಮಧ್ಯಾಹ್ನ ಊಟ ಮಾಡುತಿದ್ದ ಮಗನಿಗೆ ಸ್ವತಃ ತಂದೆಯೇ ಏಕಾಏಕಿ ಬಂದು ಚೂರಿ ಇರಿದಿರುವ ಘಟನೆ ನಡೆದಿದೆ
ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗಾದಲ್ಲಿ ವಾಸ್ತವ್ಯ ಹೊಂದಿರುವ ಗೊರಗೋಡಿನ ಜಿ.ಆರ್ ತೀರ್ಥೇಶ್ ರವರು ಊಟ ಮಾಡುವ ವೇಳೆ ಏಕಾಏಕಿ ಹೋಟೆಲ್ಗೆ ಬಂದ ಅವರ ತಂದೆ ಸಂಕ್ಲಾಪುರ ರಾಜಪ್ಪ ಗೌಡ ಎಂಬುವವರು ಊಟ ಮಾಡುತ್ತಿದ್ದ ತೀರ್ಥೇಶ್ ಎಂಬುವವರಿಗೆ ಚಾಕುವಿನಿಂದ ಇರಿದಿದ್ದು ತೀರ್ಥೇಶ್ ರವರ ಬೆನ್ನು ಕೈ ಹಾಗೂ ಕಿಬ್ಬೊಟ್ಟೆಗೆ ತೀವ್ರ ಗಾಯವಾಗಿದೆ.
 ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದವರು ನೋಡು ನೋಡುತ್ತಿದ್ದಂತೆ ಈ ಘಟನೆ ನಡೆದು ಹೋಗಿದೆ.
ತಕ್ಷಣ ತೀರ್ಥೇಶ್ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗಿದೆ.
ಜಮೀನು ವ್ಯಾಜ್ಯ ಸಂಬಂಧ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಹೊಸನಗರ ಪೊಲೀಸರು ಸಂಕಲಾಪುರ ರಾಜಪ್ಪ ಗೌಡರನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 
                         
                         
                         
                         
                         
                         
                         
                         
                         
                        
