ಶಿವಮೊಗ್ಗ: ಮೂರು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಈ ಕೆಳಕಂಡ ಪರ್ಯಾಯ ಮಾರ್ಗವನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ನಗರ-ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.49, 50 ಮತ್ತು 79 ರ ಲೆವೆಲ್ ಕ್ರಾಸಿಂಗ್‍ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‍ಗಳನ್ನು ಮುಚ್ಚಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಂಡಲಾಗಿದೆ.
ಎಲ್‍ಸಿ ನಂ 50,ಶಿವಮೊಗ್ಗ – ಸವಳಂಗಮಾರ್ಗ
ಡಿ.06 ರ ರಾತ್ರಿ 10.30 ರಿಂದ ಡಿ.07 ರ ರಾತ್ರಿ 07 ಗಂಟೆವರೆಗೆ ಎಲ್‍ಸಿ ನಂ 52 ರ ಕಾಶಿಪುರ ಮತ್ತು ಎಲ್‍ಸಿ ನಂ-49 ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಂ ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.
ಎಲ್‍ಸಿ ನಂ-79,ಸಾಗರ – ಆನಂದಪುರ ಮಾರ್ಗ
ಡಿ.09ರ ರಾತ್ರಿ 10.30 ರಿಂದ ಡಿ.10 ರ ರಾತ್ರಿ 07 ಗಂಟೆವರೆಗೆ ಚೋರಡಿ-ಶೆಟ್ಟಿಕೊಪ್ಪ-ಸೂಡೂರು-5ನೇ ಮೈಲಿಗಲ್-ಆಯನೂರು ಮತ್ತು ಎಲ್‍ಸಿ 73 ರ ಮಾರ್ಗವಾದ ಬಾಲೆಕೊಪ್ಪ ಚಿಕ್ಕಮರಸ-ಕುಂಸಿ ಮುಖಾಂತರ ಸಂಚರಿಸಲು ಅವಕಾಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.