w
Headlines
Home » ಬಿಜೆಪಿ ಆಡಳಿತ ಈಗಾಗಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ : ಮಾಜಿ ಶಾಸಕ ಮಧು ಬಂಗಾರಪ್ಪ

ಬಿಜೆಪಿ ಆಡಳಿತ ಈಗಾಗಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ : ಮಾಜಿ ಶಾಸಕ ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ವಿಧಾನಪರಿಷತ್ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪನವರು  ಆರ್ ಪ್ರಸನ್ನಕುಮಾರ್ ಅತ್ಯುತ್ತಮ ಅಭ್ಯರ್ಥಿಯಾಗಿದ್ದರೆ ಪ್ರಾಮಾಣಿಕವಾಗಿ ಈಗಾಗಲೇ ಕೆಲಸವನ್ನ ಮಾಡಿದ್ದಾರೆ ಹಾಗಾಗಿ ಅವರನ್ನು ಸರ್ವಾನುಮತದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಬಿಜೆಪಿಯ ಆಡಳಿತ ಈಗಾಗ್ಲೇ ಜನಕ್ಕೆ ವಾಕರಿಕೆ ಬಂದಂತಾಗಿದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡಿತಲ್ಲಾ ಮನೆ ಕೊಡದೆ ಇರುವವರು ಹಾಗೂ ಎನರ್ಜಿಯ ಹಣ ಬಿಡುಗಡೆ ಮಾಡದೆ ಇರುವವರು  ಬಿಜೆಪಿಯವರು.
ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕನ್ನು ಮೊಟಕು ಗೊಳಿಸಿದ ಸರ್ಕಾರವೆಂದರೆ ಅದು ಬಿಜೆಪಿ ಮಾತ್ರ ಎಂದು ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿದರು.

ಆರ್ ಪ್ರಸನ್ನಕುಮಾರ್ ಅವರನ್ನು ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡುವುದರಲ್ಲಿ ಅನುಮಾನವೇ ಇಲ್ಲ ಹಾಗಾಗಿ ಕಾಂಗ್ರೆಸ್  ಅಭ್ಯರ್ಥಿಯನ್ನು ನಾವೆಲ್ಲ  ಗೆಲ್ಲಿಸೋಣ ಎಂದು ಅಭ್ಯರ್ಥಿ ಪರ ಬ್ಯಾಟ್ ಬೀಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು, ರಾಜನಂದಿನಿ, ಕಲಗೋಡು ರತ್ನಾಕರ ಹಾಗೂ ಸಾಗರ ಮತ್ತು  ಆನಂದಪುರದ ಮುಖಂಡರುಗಳು ಉಪಸ್ಥಿತರಿದ್ದರು 


ವರದಿ : ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.