ಶಿವಮೊಗ್ಗ : ಅಕಾಲಿಕ ಮಳೆಗೆ ಶಿವಮೊಗ್ಗ ಜಿಲ್ಲೆಯ ಜನತೆ ತತ್ತರಿಸಿದ್ದು, ಕಳೆದ 20 ದಿನಗಳಲ್ಲಿ 100 ಮಿ.ಮೀಗೂ ಅಧಿಕ ಮಳೆಯಾಗಿದ್ದು
ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ,ಗೆ ನೇರವಾಗಿ ಹೊಡೆತ ರೈತಾಪಿ ವರ್ಗಕ್ಕೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಳೆಯ ಕಾರಣದಿಂದ ಸ್ವಲ್ಪ ಬೆಳೆ ಕೊಯ್ಲು ಮಾಡಿ ಕಟಾವು ಆದ ಬೆಳೆಗಳನ್ನು ಒಣಗಿಸಲೂ ಆಗದೆ, ಸಂಸ್ಕರಿಸಲು ಆಗದೆ, ಇತ್ತ ಹೊಲದಲ್ಲೂ ಬೆಳೆಯನ್ನು ಬಿಡಲೂ ಆಗದೆ ಹಾಳಾಗುವ ಪರಿಸ್ಥಿತಿ ರೈತನದ್ದಾಗಿದೆ.
ಭಾರೀ ಮಳೆಯಿಂದಾಗಿ ಕಟಾವಿಗೆ ಬಂದ ಅಧಿಕ ಪ್ರಮಾಣದ ಭತ್ತದ ಬೆಳೆಗೆ ಹಾನಿಯಾಗಿದೆ. ಇನ್ನು ಮೆಕ್ಕೆಜೋಳ ಬೆಳೆಯೂ ಸಂಪೂರ್ಣ ನಾಶವಾಗಿದ್ದು, ಭತ್ತಬೆಳೆ ಗದ್ದೆಯಲ್ಲೇ ಮೊಳಕೆ ಬರುವ ಸ್ಥಿತಿಗೆ ತಲುಪಿದೆ..ಕಟಾವಿಗೆ ಬಂದ ಭತ್ತ ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ, ಇನ್ನು ಬಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು, ಪ್ರಮುಖ ಆಹಾರ ಬೆಳೆ ಕೈಗೆ ಸಿಗದೇ ನೀರಿನಲ್ಲಿ ತೇಲುವ ಸ್ಥಿತಿ ಕಂಡು ರೈತರು ಅಕ್ಷರಶಃ ಸಹ ದಿಕ್ಕೆಟ್ಟು ನಿತ್ತಿದ್ದಾರೆ.
ಲಭ್ಯವಿರುವ ಮಾಹಿತಿಯಂತೆ ಮಲೆನಾಡಿನಲ್ಲಿ ಸುರಿದ ಭಾರೀ ಮಳೆಗೆ 87 ಹೆಕ್ಟೇರ್ ಅಧಿಕ ಭತ್ತ 15 ಹೆಕ್ಟೇರ್ ಮೆಕ್ಕೆಜೋಳ ಮತ್ತು , 30 ಹೆಕ್ಟೇರ್ನಷ್ಟು ತೋಟಗಾರಿಕಾ ಬೆಳೆ ಹಾಗೂ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗೆ ತೀವ್ರಹಾನಿಯಾಗಿದ್ದು ಈಗಾಗಲೇ ಕೊನೆಕೊಯ್ಲು ಮುಗಿಸಿದ ರೈತರು ಅಡಿಕೆಯನ್ನ ಬೇಯಿಸಿ ಹದಗೊಳಿಸಲು ಬಿಸಿಲನ್ನು ಕಾಣದೆ ಅಡಿಕೆ ಹೂ ಬಂದು, ಒಣಗಿಸಿಸಲು ಪರ್ಯಾಯವಾಗಿ,ಹೊಗೆ ತಟ್ಟಿ, ಪಾಲಿ ಹೌಸ್ , ಮೊರೆ ಹೋಗಿದ್ದಾರೆ. ಹಾಗೂ ಇನ್ನು ಅನೇಕ ಉಪಕ್ರಮ ಅನುಸರಿಸಿದರೂ, ಸಹ ಉತ್ತಮ ಗುಣಮಟ್ಟದ ಅಡಿಕೆಯನ್ನ ನೈಸರ್ಗಿಕವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ….ಇಂದು ಸಹ ಮೋಡಕವಿದ ವಾತಾವರಣವಿದ್ದು, ಮತ್ತೆ ಮಳೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋದರೆ ಎನ್ನುವ ಭೀತಿಯಲ್ಲೇ ದಿನ ದೂಡುತ್ತಿದ್ದಾರೆ ಅಡಿಕೆ ಬೆಳೆಗಾರರು.
ಈ ಕೊಡಲೇ ಸರ್ಕಾರ, ಹಾಗೂ ಸಂಬಂಧಪಟ್ಟ ಇಲಾಖೆ ಬೆಳೆ ಸಮೀಕ್ಷೆ ನೆಡೆಸಿ,ಸಂಕಷ್ಟಕ್ಕೆ ಸಿಲುಕಿದ ಮಲೆನಾಡ ರೈತರ ಹಿತಕಾಪಾಡಲಿ ಎಂಬ ಕೂಗು ಕೇಳಿಬರುತ್ತಿದೆ.
ಇನ್ನು ಮನೆಗಳಿಗೂ ಸಹ ಹಾನಿಯಾಗಿದ್ದು, ಶಿವಮೊಗ್ಗದಲ್ಲಿ 7, ಭದ್ರಾವತಿಯಲ್ಲಿ 9 ಮನೆ ಸೇರಿದಂತೆ ಒಟ್ಟು 16 ಮನೆಗಳು ಸಂಪೂರ್ಣ ಕುಸಿತಗೊಂಡಿದೆ. ಅಲ್ಲದೇ ಜಿಲ್ಲೆಯ 101 ಮನೆಗಳಿಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ. ಇನ್ನೂ ನೂರಕ್ಕೂ ಹೆಚ್ಚು ಮನೆಗಳು ಬೀಳುವ ಆತಂಕದಲ್ಲಿದೆ.
ವರದಿ :ಅಜಿತ್ ಗೌಡ ಬಡೇನಕೊಪ್ಪ