Headlines

ಬಂಗಾರಪ್ಪ ಮನೆಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ: ಮಧು ಬಂಗಾರಪ್ಪ ಜೊತೆ ವಾಕಿಂಗ್​..ಟಾಕಿಂಗ್

ಸೊರಬ : ತಾಲೂಕಿನ ಕುಬಟೂರಿನ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಮನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ.
ಹಾನಗಲ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ನಿನ್ನೆ ರಾತ್ರಿ ಬಂಗಾರಪ್ಪ ಮನೆಯಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಕುಬಟೂರಿನ ಮನೆಯ ಆವರಣದಲ್ಲಿ ಮಧು ಬಂಗಾರಪ್ಪ ಜೊತೆ ಸಿದ್ದರಾಮಯ್ಯ ವಾಕಿಂಗ್​ ಮಾಡಿದ್ದಾರೆ.

ಬಳಿಕ ಮಧು ಬಂಗಾರಪ್ಪ ಹಾಗೂ ಇತರ ನಾಯಕರ ಜೊತೆ ಚರ್ಚೆ ನಡೆಸಿದ ಸಿದ್ದರಾಮಯ್ಯ ಪಕ್ಷ ಸಂಘಟನೆ ಮತ್ತು ರಾಜಕೀಯ ಬೆಳವಣಿಗೆ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.

ತಂದೆ ಬಂಗಾರಪ್ಪರಂತೆ ಮಧು ಬಂಗಾರಪ್ಪ ಕೂಡ ರಾಜ್ಯ ನಾಯಕರಾಗುತ್ತಾರೆ: ಸಿದ್ದರಾಮಯ್ಯ::

ಸೊರಬ : ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಧು ಬಂಗಾರಪ್ಪನವರ ಮನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸೊರಬ ತಾಲೂಕು ಕುಬಟೂರಿನಲ್ಲಿರುವ ಅವರ ನಿವಾಸಕ್ಕೆ ನಿನ್ನೆ ರಾತ್ರಿ ಭೇಟಿ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಇಂದು ಬೆಳಗ್ಗೆ ಮಧು ಬಂಗಾರಪ್ಪನವರ ಜೊತೆ ವಾಕಿಂಗ್ ಮಾಡಿ, ಬೆಳಗಿನ ಉಪಹಾರ ಮುಗಿಸಿ ಅಲ್ಲಿಂದ ಹಾನಗಲ್ ಪ್ರಚಾರಕ್ಕೆ ತೆರಳಿದರು.

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧು ಅವರು ತಮ್ಮ ತಂದೆ ಬಂಗಾರಪ್ಪರಂತೆ ರಾಜ್ಯ ನಾಯಕರಾಗುತ್ತಾರೆ. ಬಂಗಾರಪ್ಪನವರ ಸ್ಥಾನವನ್ನು ತುಂಬುತ್ತಾರೆ ಎಂದು ಭವಿಷ್ಯ ನುಡಿದರು.

ಮಧು ಅವರನ್ನು ಒಂದು ಬಾರಿ ಶಾಸಕರನ್ನಾಗಿಸಿದ್ದೀರಿ, ಮುಂದಿನ ಬಾರಿ ಮತ್ತೆ ಅವರನ್ನು ಶಾಸಕರನ್ನಾಗಿ ಮಾಡಿ ಎಂದು ವಿನಂತಿಸಿದ ಸಿದ್ದರಾಮಯ್ಯ, ಅಲ್ಲಿಂದ ಬಳಿಕ ಹಾನಗಲ್ ಪ್ರಚಾರಕ್ಕೆ ತೆರಳಿದರು.

Leave a Reply

Your email address will not be published. Required fields are marked *