Headlines

ಚಲಿಸುತ್ತಿದ್ದ ಪ್ಯಾಸೇಂಜರ್ ಆಟೋದಿಂದ ಬಿದ್ದು ಬಾಲಕ ಸಾವು :

 ಸೊರಬ : ತಾಲೂಕಿನ ಶಿಡ್ಡಿಹಳ್ಳಿ ಗ್ರಾಮದಿಂದ ಹಸ್ವೀ ಗ್ರಾಮಕ್ಕೆ ಪ್ಯಾಸೆಂಜರ್ ಆಟೋದಲ್ಲಿ ತೆರಳುವಾಗ 9 ವರ್ಷದ ಬಾಲಕ ಆಟೋದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಆನವಟ್ಟಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

ಮಾಲತೇಶ್ ಎಂಬ 9 ವರ್ಷದ ಬಾಲಕ ಪ್ಯಾಸೆಂಜರ್ ಆಟೋದ ಹಿಂಬದಿಯ ಫುಟ್ ಬೋರ್ಡ್ ನಲ್ಲಿ ನಿಂತಿದ್ದು, ಆಟೋವನ್ನು ಅರುಣ್ ಎಂಬ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷದಿಂದ ಚಲಾಯಿಸಿದ ಪರಿಣಾಮ ಮಾಲತೇಶ್ ಶಿಡ್ಡಿಹಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ತಿರುವಿನ ಬಳಿ ಬಿದ್ದಿದ್ದಾನೆ.

ಎದೆ ಹಾಗೂ ಎಡಕಣ್ಣಿಗೆ ತೀವ್ರವಾಗಿ ಹೊಡೆತ ಬಿದ್ದ ಬಾಲಕನನ್ನ ಗ್ರಾಮಸ್ಥರು ಉಪಚರಿಸಿ ಮಾಲತೇಶ್ ತಂದೆ ನಿಂಗಪ್ಪನಿಗೆ ಮೊಬೈಲ್ ನಲ್ಲಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ತಾಯಿ ಆತನನ್ನ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾಲತೇಶ್ ಮಾರ್ಗ ಮಧ್ಯೆದಲ್ಲಿ 
ಅಸುನೀಗಿದ್ದಾನೆ.

ಆಟೋಗೆ ಇನ್ನೂ ನೋಂದಣಿ ನಂಬರ್ ಹಾಕಿರಲಿಲ್ಲ ಹಾಗೂ ತ್ರಿಚಕ್ರ ಆಟೋವಾಗಿದ್ದು ಚಾಲಕ ಅರುಣ್ ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕನ ತಂದೆ ನಿಂಗಪ್ಪ ಎಫ್ ಐಆರ್ ನಲ್ಲಿ ತಿಳಿಸಿದ್ದಾರೆ. ಈ ಘಟನೆ ಅ.19 ರಂದು ನಡೆದಿದೆ.

Leave a Reply

Your email address will not be published. Required fields are marked *