ಚಹರೆ ಹೀಗಿದೆ
ದುಂಡು ಮುಖ ದೃಢಕಾಯ ಮೈಕಟ್ಟು ಬಿಳಿಯ ಬಣ್ಣ ಹೊಂದಿದ್ದು ಸಿಮೆಂಟ್ ಬಣ್ಣದ ಟೀಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಾನೆ. ಒಂದು ಅಂದಾಜಿನ ಪ್ರಕಾರ ಶಿವಮೊಗ್ಗದ ಕಡೆಯಿಂದ ಭದ್ರಾವತಿಯ ಕಡೆ ಮುಖ ಮಾಡಿ ರೈಲ್ವೆ ಹಳಿಯ ಪಕ್ಕದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ರೈಲು ಡಿಕ್ಕಿ ಹೊಡೆದು ತಲೆ ಹೋಳಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸ್ಥಳಕ್ಕೆ ರೈಲ್ವೆ ಸಬ್ ಇನ್ಸ್ಪೆಕ್ಟರ್ ಇಂದಿರಾ ರವರು ಮತ್ತು ಆರಕ್ಷಕ ಸಿಬ್ಬಂದಿಗಳು ತನಿಖೆ ಕೈಗೊಂಡು ಮೃತನ ಶವ ಶಿವಮೊಗ್ಗದ ಮೆಗ್ಗಾನ್ ಶವಾಗಾರದಲ್ಲಿಡಲು ಸಿದ್ದತೆ ನಡೆಯುತ್ತಿದ್ದು. ಈ ವ್ಯಕ್ತಿಯ ಚಹರೆಯನ್ನು ಯಾರಾದರೂ ಕಂಡಿದ್ದರೆ ರೈಲ್ವೆ ಇನ್ಸ್ಪೆಕ್ಟರ್ ರವರ ಕಛೇರಿಯಲ್ಲಿ ವಿಚಾರಿಸಬಹುದುದಾಗಿದೆ.