ರಿಪ್ಪನ್ ಪೇಟೆ : ಭಾರತದ ಪ್ರಧಾನಿ ನರೇಂದ್ರ ಮೋದಿಯವರ 71 ನೇ ವರ್ಷದ ಜನ್ಮದಿನದ ಅಂಗವಾಗಿ ಸೇವಾ ಮತ್ತು ಸಮರ್ಪಣ ಅಭಿಯಾನ ಅಡಿಯಲ್ಲಿ ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಭಾರತೀಯ ಜನತಾ ಪಕ್ಷದ ರಿಪ್ಪನ್ ಪೇಟೆ ಮಹಾಶಕ್ತಿ ಕೇಂದ್ರದ ವ್ಯೆದ್ಯಕೀಯ ಪ್ರಕೋಷ್ಟದ ವತಿಯಿದ ಆಯೋಜಿಸಲಾಗಿತ್ತು.
ಪಟ್ಟಣದ ಗೌಡ ಸಾರಸ್ವತ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ರಾಕೇಶ್ ಈ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಅವಶ್ಯಕವಾಗಿದೆ,ಕಳೆದೆರಡು ವರ್ಷಗಳಿಂದ ಕೋವೀಡ್ ಸೋಂಕಿನಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿವೆ.ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಅನೇಕ ಸಾವು ನೋವುಗಳು ಸಂಭವಿಸುವುದು ದುರದೃಷ್ಟಕರವಾಗಿದ್ದು,ಇಂತಹ ಆರೋಗ್ಯಕ್ಕೆ ಸಂಬಂಧಿಸಿದಂತಹ ಶಿಬಿರದ ಪ್ರಯೋಜನವನ್ನು ಜನಸಾಮಾನ್ಯರು ಪಡೆಯಬೇಕೆಂದು ಮನವರಿಕೆ ಮಾಡಿದರು.ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಸಂಬಂಧಿಸಿದ ವ್ಯೆದ್ಯರ ಸಂಪರ್ಕಕ್ಕೆ ಬಂದು ಸೂಕ್ತ ಸಲಹೆ ಪಡೆದು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ನಂತರ ಮಾತನಾಡಿದ ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನದ ಅಂಗವಾಗಿ ಸೇವಾ ಮತ್ತು ಸಮರ್ಪಣಾ ಅಭಿಯಾನ ಅಡಿಯಲ್ಲಿ ಹತ್ತಾರು ಕಾರ್ಯಕ್ರಮವನ್ನು ಹಮಿಕೊಂಡಿದ್ದು ಅದರಲ್ಲಿ ಆರೋಗ್ಯ ತಪಸಣಾ ಶಿಬಿರವು ಒಂದು.ಇಂತಹ ಕಾರ್ಯಕ್ರಮದ ಸೌಲಭ್ಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪಬೇಕೆಂಬುವುದು ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರ ಆಶಯವಾಗಿದ್ದು ಅದರಂತೆಯೇ ನಮ್ಮ ಪಕ್ಷದ ವತಿಯಿಂದ ರಾಷ್ಟ್ರಾದ್ಯಂತ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ಶಿಬಿರದಲ್ಲಿ ನೂರಕ್ಕು ಹೆಚ್ಚು ಜನ ಭಾಗವಹಿಸಿ ಹೃದಯ ತಪಾಸಣೆ ಮಾಡಿಸಿಕೊಂಡು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು,ಶುಶ್ರೂಕಿಯರಿಗೆ ಹಾಗೂ ತಂತ್ರಜ್ಞಾನ ತಂಡಕ್ಕೆ ಸನ್ಮಾನಿಸಿ ಗೌರವಿಸಲಾಯಿತು.
ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯ ವ್ಯೆದ್ಯರಾದ ಅಸ್ಮಾ ಭಾನು,ಕಾರ್ಡಿಯಾಕ್ ಸೊನೊಗ್ರಾಫ಼ರ್ ಕ್ಲಿಂಟನ್ ,ಮ್ಯಾಕ್ಸ್ ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ದರ್ಶನ್ ಹಾಗೂ ಶುಶ್ರೂಕಿಯರಾದ ಶ್ವೇತಾ,ಸುಶ್ಮಿತಾ,ಕಲ್ಪನಾ,ಅಜಯ್ ಹಾಗು ಇನ್ನಿತರರು ಮ್ಯಾಕ್ಸ್ ಆಸ್ಪತ್ರೆಯಿಂದ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕ್ ಬಿಜೆಪಿ ಅಧ್ಯಕ್ಷರಾದ ಗಣಪತಿ ಬೆಳಗೋಡು,ಬಿಜೆಪಿಯ ಜಿಲ್ಲಾ ಮುಖಂಡರಾದ ಎನ್ ದೇವಾನಂದ್,ಆರ್ ಟಿ ಗೋಪಾಲ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ವೀರೇಶ್ ಆಲುವಳ್ಳಿ,ಸುರೇಶ್ ಸ್ವಾಮಿರಾವ್ ಹಾಗು ಮುಖಂಡರಾದ ಎ ವಿ ಮಲ್ಲಿಕಾರ್ಜುನ,ಗ್ರಾಪಂ ಸದಸ್ಯರಾದ ಸುಧೀಂದ್ರ ಪೂಜಾರಿ,ಬಿಜೆಪಿ ವ್ಯೆದ್ಯಕೀಯ ಪ್ರಕೋಷ್ಟದ ಸಂಚಾಲಕರಾದ ಸುರೇಶ್ ಸಿಂಗ್,ಬಿಜೆಪಿ ಮುಖಂಡರಾದ ಎನ್ ಸತೀಶ್,ಜಂಬಳ್ಲಿ ಗಿರೀಶ್,ಕೃಷ್ಣೋಜಿರಾವ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.