ಚಂದ್ರಗುತ್ತಿ :: ಇಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು,ಈ ಸಮಯದಲ್ಲಿ ಡಾ ರಾಘವೇಂದ್ರರವರು ಮಾತನಾಡಿ ಕರೋನಾ ನಿಯಂತ್ರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಮತ್ತು ಆಶಾಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರವಾದದ್ದದ್ದು ,ಕರೋನ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲರೂ ತಪ್ಪದೇ ಕರೋನಾ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸಿದರು.
ಸೊರಬ ತಾಲೂಕಿನಲ್ಲಿ ಕರೋನ ತಡೆಗಟ್ಟುವಿಕೆಯಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರು ಮತ್ತು ತಾಲೂಕ್ ವೈದ್ಯಾಧಿಕಾರಿ ಅಕ್ಷತಾ ಖಾನಾಪುರ ಹಾಗೂ ತಾಲೂಕು ಆಡಳಿತ ಸಂಪೂರ್ಣ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಈ ಸಂಧರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಸಿಬಂದಿಗಳಾದ ಮಲ್ಲಮ್ಮ,ವೀಣಾ,ಬೇಬಿ,ವೀಣಾ ನಾಯ್ಕ್,ಅನಿತಾ,ಪೂಜಾ,ಉಷಾ,ಕಾವ್ಯ,ಚೇತನಾ,
ಪ್ರಿಯಾಂಕಾ,ಪ್ರವೀಣ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವರದಿ:ಪ್ರಸನ್ನ ಶೇಟ್ ಚಂದ್ರಗುತ್ತಿ