Headlines

ರಿಪ್ಪನ್ ಪೇಟೆ ಜಿಪಂ,ತಾಪಂ ಮೀಸಲಾತಿ ಪ್ರಕಟ: ಟವೆಲ್ ಹಾಕಲು ಸಿದ್ದರಾದ ಆಕಾಂಕ್ಷಿಗಳು

ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಯ ಚುನಾವಣಾ ಮೀಸಲಾತಿ ಪ್ರಕಟಗೊಂಡಿದ್ದು ಜಿಲ್ಲಾ ಪಂಚಾಯತ್ ಗೆ ಸಾಮಾನ್ಯ ಹಾಗೂ ತಾಲೂಕ್ ಪಂಚಾಯತ್ ಗೆ ಸಾಮಾನ್ಯ ಮಹಿಳೆ ಕೆಟಗೆರಿ ಬಂದಿದ್ದು ಚುನಾವಣ ಕಣ ರಂಗೇರಿದೆ.

ರಿಪ್ಪನ್ ಪೇಟೆ ಜಿಪಂ ಮತ್ತು ತಾಪಂ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದು ಕೊನೆಯಲ್ಲಿ ಯಾರಿಗೇ ಟಿಕೇಟ್ ಖಾತ್ರಿಯಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

ಬಿಜೆಪಿ ಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ ಅದರಲ್ಲಿ ಮುಂಚೂಣಿಯಲ್ಲಿ ಕಳೆದ ಬಾರಿ ಹುಂಚಾ ತಾಪಂ ಸದಸ್ಯರಾಗಿ ಆಯ್ಕೆಯಾಗಿ ತಾಲೂಕ್ ಪಂಚಾಯತ್ ಅಧ್ಯಕ್ಷರಾಗಿದ್ದ ವೀರೇಶ್ ಆಲುವಳ್ಳಿ ಯವರ ಹೆಸರು ತೇಲಿಬರುತ್ತಿದೆ.ಪ್ರಬಲ ಆಕಾಕ್ಷಿಯಾದ ಇವರು ಈ ಹಿಂದೆ ಅರಸಾಳು ತಾಪಂ ಸದಸ್ಯರಾಗಿದ್ದು ಕೆಟಗೆರಿ ಬರದೇ ಇರುವ ಕಾರಣ ಕ್ಷೇತ್ರ ಬದಲಾಯಿಸಿದ್ದರು.ಇವರು ಸದ್ಯದ ಪರಿಸ್ಥಿತಿಯಲ್ಲಿ ಗೆಲ್ಲುವ ಕುದುರೆ ಎಂದು ಬಿಂಬಿಸಲಾಗುತ್ತಿದೆ.
ಹಾಗೇಯೇ ಬಿಜೆಪಿಯಲ್ಲಿ ಶಾಸಕರ ಆಪ್ತ ಹಾಗೂ ಉದ್ಯಮಿಯಾದ ನಾಗರಾಜ್ ಶೆಟ್ಟಿ, ಬಿಜೆಪಿಯ ಹಿರಿಯ ಮುಖಂಡರಾದ ಆರ್ ಟಿ ಗೋಪಾಲ್,ಸತೀಶ್ ಮ್ಯಾಮ್ಕೋಸ್,ಬೆಳ್ಳೂರು ತಿಮ್ಮಪ್ಪ ರವರ ಹೆಸರುಗಳು ಸದ್ಯ ಬಿಜೆಪಿಯ ವಲಯದಲ್ಲಿ ಕೇಳಿಬರುತ್ತಿದೆ

ಕಾಂಗ್ರೆಸ್ ನಲ್ಲಿ ಮಾಜಿ ಜಿಪಂ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ನ ಪ್ರಭಾವಿ ಮುಖಂಡ ಕಲಗೋಡು ರತ್ನಾಕರ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.ಕಲಗೋಡು ರತ್ನಾಕರ್ ಕಳೆದ ಬಾರಿ ಕಸಬಾ ಜಿಪಂ ಕ್ಷೇತ್ರದಲ್ಲಿ ಅಯ್ಕೆಯಾಗಿದ್ದರು.ಈ ಬಾರಿ ಅಲ್ಲಿ ಕೆಟಗೇರಿ ಪರಿಶಿಷ್ಟ ಮಹಿಳೆ ಬಂದಿದ್ದು ರಿಪ್ಪನ್ ಪೇಟೆ ಜಿಪಂ ಕಡೆ ಮುಖ ಮಾಡಿದ್ದಾರೆ.
ಹಾಗೇಯೇ ಹೊಸನಗರ ಎಪಿಎಂಸಿ ಅಧ್ಯಕ್ಷರು ರಿಪ್ಪನ್ ಪೇಟೆ ಜಿಪಂ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಮತ್ತು ಮಾಜಿ ತಾಪಂ ಸದಸ್ಯರಾದ ಎಂಬಿ ಲಕ್ಷಣಗೌಡ ರವರ ಹೆಸರುಗಳು ತೇಲಿಬರುತ್ತಿವೆ.

ಜೆಡಿಎಸ್ ನಲ್ಲಿ ಈ ಬಗ್ಗೆ ಯಾವುದೇ ಚಟುವಟಿಕೆ ಇಲ್ಲದೇ ಕೇವಲ ಕಾದು ನೋಡುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ರಿಪ್ಪನ್ ಪೇಟೆ ತಾಪಂ

ಬಿಜೆಪಿಯಲ್ಲಿ ಮಾಜಿ ತಾಪಂ ಸದಸ್ಯರಾದ ನಾಗರತ್ನ ದೇವರಾಜ್ ಹೆಸರು ಮುಂಚೂಣಿಯಲ್ಲಿದ್ದು ಸದ್ಯದ ಪರಿಸ್ಥಿತಿಯಲ್ಲಿ ಗೆಲ್ಲುವ ಕುದುರೆಯಾಗಿದ್ದಾರೆ.ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಕಾಂಗ್ರೆಸ್ ನಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ,
ಅಲ್ಪಸಂಖ್ಯಾತ ಅಭ್ಯರ್ಥಿಗೆ ಮಣೆ ಹಾಕುವ ಸಾಧ್ಯತೆಯೂ ಇದೆ ಎಂದು ಕೇಳಿ ಬಂದಿದೆ

ಜೆಡಿಎಸ್ ಕಾದು ನೋಡುವ ತಂತ್ರಗಾರಿಕೆಯಲ್ಲಿ ತೊಡಗಿದೆ.

ಒಟ್ಟಾರೆಯಾಗಿ ರಿಪ್ಪನ್ ಪೇಟೆಯ ಮತದಾರರು ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲ ಅಭ್ಯರ್ಥಿಗೆ ಒತ್ತು ಕೊಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *