ಹುಲ್ತಿಕೊಪ್ಪ:ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳು ಪದೋನ್ನತಿ ಹೊಂದಿ ಬೇರೆ ಕಡೆಗೆ ವರ್ಗಾವಣೆಗೊಂಡ ಶ್ರೀಮತಿ ಲಕ್ಷ್ಮಿ ,ಶ್ರೀಮತಿ ಕುಸುಮ ಸಿಸ್ಟರ್ ಹಾಗೂ ಹೆಚ್ ಪಿ ನಾಗರಾಜ್ ಅವರನ್ನು ಗೌರವ ಪೂರ್ಣವಾಗಿ ಬೀಳ್ಕೊಡಲಾಯಿತು.
ಇದೇ ಸಂದರ್ಭದಲ್ಲಿ ಚಂದ್ರಗುತ್ತಿಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಇಂದುಧರ್ ಪಾಟೀಲ್ ಸರ್ ಅವರ ಕಾರ್ಯವನ್ನು ಸ್ಮರಿಸಿ ಅಭಿನಂದಿಸಲಾಯಿತು,
ಈ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ವಿನಯ್ ಕುಮಾರ್ ಪಾಟೀಲ್ ರವರು ಮಾತನಾಡಿ ಯಾವುದೇ ಒಂದು ಆಡಳಿತ ವ್ಯವಸ್ಥೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಸೇವೆ ನೀಡಿದರೆ ಉತ್ತಮ ಸೇವೆ ದೊರೆಯುವುದು ಎಂದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಅಕ್ಷತಾ ಖಾನಾಪುರ್ ರವರು ಈ ಕೊರೋನಾ ಎರಡನೆಯ ಸಮಯದಲ್ಲಿ ಕಾರ್ಯನಿರ್ವಹಿಸಿದ ಸೊರಬ ತಾಲ್ಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತರನ್ನು ಅಭಿನಂದಿಸಿದರು, ಹಾಗೂ ಮೂರನೆಯ ಅಲೆಯ ಸಂಭವವಿದ್ದು ತಯಾರಾಗಲು ಸೂಚಿಸಿದರು,
ನಿರೂಪಣೆಯನ್ನು ಗಾಯತ್ರಿ ಸಿಸ್ಟರ್ ನಿರ್ವಹಿಸಿದರು, ಪ್ರಾರ್ಥನೆಯನ್ನು ಸುಮನ್ ಪಿ ಮತ್ತು ಪವಿತ್ರ ಸಿಸ್ಟರ್ ಮಾಡಿದರು, ಸ್ವಾಗತವನ್ನು ಮಂಜುನಾಥ್ ರಾವ್ ಮಾಡಿದರು, ರೇಖಾ, ಆಶಾ, ಪುನೀತ್ ಸರ್ ಮತ್ತು ಪ್ರಶಾಂತ್ ನಾಯಕ್ ಅನಿಸಿಕೆ ಹಂಚಿಕೊಂಡರು, ರೇಣುಕಾಪ್ರಸಾದ್ ವಂದನಾರ್ಪಣೆಯನ್ನು ಮಾಡಿದರು.ಎಂಲ್ಎಚ್ ವಿಗಳಾದ ಶ್ರೇಯ ,ಅಂಜುಮ್,ಹರೀಶ್,ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ:ಪ್ರಸನ್ನ ಶೇಟ್ ಚಂದ್ರಗುತ್ತಿ