ರಿಪ್ಪನ್ ಪೇಟೆ: ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು- ಶಿವಮೊಗ್ಗ- ತಾಳಗುಪ್ಪ ಪ್ಯಾಸೆಂಜರ್ ರೈಲು ನಿಲ್ದಾಣಕ್ಕೆ ಆಗ್ರಹಿಸಿ ಮಾನ್ಯ ಸಂಸದರಾದ ಬಿ ವೈ ರಾಘವೇಂದ್ರ ಹಾಗೂ ಶಾಸಕ ಮತ್ತು MSIL ಅಧ್ಯಕ್ಷರಾದ ಶ್ರೀ ಹರತಾಳು ಹಾಲಪ್ಪ ನವರಿಗೆ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಮತ್ತು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ರಿಪ್ಪನ್ ಪೇಟೆ ಸಭಾಭವನದಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ರವರು ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೋತ್ಸವ ವರ್ಷಕ್ಕೆ ಎರಡು ಬಾರಿ ಕೆಂಚನಾಲ ಗ್ರಾಮದಲ್ಲಿ ನಡೆಯುತ್ತಿದ್ದು ಅಲ್ಲದೇ ರಾಜ ಮಹಾರಾಜರ ಕಾಲದಲ್ಲೂ ಕೂಡ ಇಲ್ಲಿ ರೈಲು ನಿಲುಗಡೆ ಇದ್ದು ಈ ಭಾಗದ ಜನ ರೈಲು ಸಂಚಾರದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.ರೈಲು ನಿಲುಗಡೆ ಇಲ್ಲದೇ ಇರುವುದರಿಂದ ಈ ಭಾಗದ ವಿಧ್ಯಾರ್ಥಿಗಳು, ಸಾರ್ವಜನಿಕರು ಎಂಟು ಕಿಮೀ ನಡೆದು ಬಂದು ಬಸ್ ಸಂಪರ್ಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಕೆಂಚನಾಲದಲ್ಲಿ ರೈಲು ನಿಲುಗಡೆಯಿಂದ ಸುತ್ತಮುತ್ತಲಿನ ನೂರಾರು ಕಂದಾಯ ಗ್ರಾಮಗಳಿಗೆ ಸಹಕಾರಿಯಾಗಲಿದೆ ಎಂದರು.
ವೀರೇಶ್ ಆಲುವಳ್ಳಿ ಮಾತನಾಡಿ ಕೆಂಚನಾಲ ಗ್ರಾಮಪಂಚಾಯಿತಿಯ ಕೆದಲುಗುಡ್ಡೆ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಐಟಿಐ ಕಾಲೇಜು ಹಾಗೂ ಮೆಸ್ಕಾಂ 110 ಕೆವಿ ಸಾಮರ್ಥ್ಯದ ಉಪವಿದ್ಯುತ್ ಸ್ಥಾವರವಿದ್ದು ಇಲ್ಲಿಗೆ ನಿತ್ಯ ನೂರಾರು ವಿಧ್ಯಾರ್ಥಿಗಳು ಹಾಗೂ ಮೆಸ್ಕಾಂ ಸಿಬ್ಬಂಧಿಗಳು ಒಡಾಡುತಿದ್ದು ರೈಲು ನಿಲುಗಡೆ ಮಾಡುವುದರಿಂದ ಎಲ್ಲಾರಿಗು ಅನೂಕೂಲವಾಗಲಿದೆ ಎಂದರು.
ಕೆಂಚನಾಲದಲ್ಲಿ ಜುಲೈ 11 ರ ಒಳಗೆ ರೈಲು ನಿಲುಗಡೆ ಮಾಡದಿದ್ದರೆ ಜುಲೈ 12ರ ನಂತರ ಕೆಂಚನಾಳ ರೈಲ್ವೆ ನಿಲ್ದಾಣದಲ್ಲಿ ಪಕ್ಷಾತೀತವಾಗಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಆರ್ ಎನ್ ಮಂಜುನಾಥ್ ಜುಲೈ 11ರ ಒಳಗೆ ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೊಳಿಸದಿದ್ದರೆ ಉಗ್ರವಾದ ಹೋರಾಟ ನಡೆಸಿ ಈ ವಿಚಾರದಲ್ಲಿ ಜೈಲಿಗೂ ಸಹ ಹೋಗಲು ಸಿದ್ಧರಿರುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಆರ್ ಎ ಚಾಬುಸಾಬ್, ಎಪಿಎಂಸಿ ಸದಸ್ಯರಾದ ಕಲ್ಯಾಣಪ್ಪ ಗೌಡ, ಕೆಂಚನಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ವರ ಹೊನ್ನಕೊಪ್ಪ ,ಬಿಜೆಪಿ ಮುಖಂಡ ನಾಗಾರ್ಜುನ ಸ್ವಾಮಿ, ಮಾರಿಕಾಂಬ ದೇವಿ ಸಮಿತಿಯ ನಿರ್ದೇಶಕ ಕೆ ಎಂ ಬಸವರಾಜ್ ಮಹೇಶ್ ಮಾಣಿಕೆರೆ ಇನ್ನಿತರರಿದ್ದರು.
ವರದಿ: ರಾಮನಾಥ್ ರಿಪ್ಪನ್ ಪೇಟೆ