ಏಕಾಏಕಿ ವಾಹನ ಅಡ್ಡಗಟ್ಟಿ ಪೊಲೀಸರು ಕೀ ಕಸಿಯುವಂತಿಲ್ಲ,ನಿಯಮ ಉಲ್ಲಂಘಿಸದ ಹೊರತು ವಾಹನ ಅಡ್ಡಗಟ್ಟುವುದಕ್ಕೆ ಡಿಜಿಪಿ ಬ್ರೇಕ್

ಏಕಾಏಕಿ ವಾಹನ ಅಡ್ಡಗಟ್ಟಿ ಪೊಲೀಸರು ಕೀ ಕಸಿಯುವಂತಿಲ್ಲ,ನಿಯಮ ಉಲ್ಲಂಘಿಸದ ಹೊರತು ವಾಹನ ಅಡ್ಡಗಟ್ಟುವುದಕ್ಕೆ ಡಿಜಿಪಿ ಬ್ರೇಕ್ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ತಪಾಸಣೆ ವೇಳೆ ಅಪಘಾತಕ್ಕೀಡಾಗಿ ಮಗು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಲವು ಸೂಚನೆಗಳನ್ನು ನೀಡಿದ್ದಾರೆ. ಈ ಸಂಬಂಧ ಶನಿವಾರ ಸುತ್ತೋಲೆ ಹೊರಡಿಸಿರುವ ಡಿಜಿಪಿ-ಐಜಿಪಿ ಡಾ। ಎಂ.ಎ.ಸಲೀಂ, ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸದ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡಬಾರದು. ವಾಹನ ತಪಾಸಣೆ…

Read More

ಅಡಿಕೆ ಕಳ್ಳತನವೆಸಗಿದ್ದ ಇಬ್ಬರ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

ಅಡಿಕೆ ಕಳ್ಳತನವೆಸಗಿದ್ದ ಇಬ್ಬರ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು ಶಿವಮೊಗ್ಗ – ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲಗಳನ್ನು ಕಳ್ಲತನ ಮಡಿಕೊಂಡು ಹೋಗಲಾಗಿದೆ ಎಂಬ ದೂರಿನನ್ವಯ ಕಾರ್ಯತತ್ಪರರಾದ ಹೊಳೆಹೊನ್ನೂರು ಪೊಲೀಸರು  ಮೂವರನ್ನು ಬಂಧಿಸಿ ಒಟ್ಟು ೬,೯೩,೦೦೦/- ರೂಗಳ ಮಾಲನ್ನು ಅಮಾನತುಪಡಿಸಿಕೊಂಡಿದ್ದಾರೆ. ಡಿ. ೧೯ರಂದು ಈ ಕಳ್ಳತನ ಸಂಭವಿಸಿದೆ ಎಂದು ಶ್ರೀನಿವಾಸಪುರದ ವಾಸಿ ರಮೇಶ್ ಎನ್ನುವವರು ದೂರು ನೀಡಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ   ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ತನಿಖಾ ತಂಡವು ಜ. ೧೧ರಂದು ಆರೋಪಿತರಾದ ಭದ್ರಾವತಿಯ ಖಾಜಿ ಮೊಹಲ್ಲಾದ, ಪಾಲಿಶ್…

Read More

ಹಸೆಮಣೆ ಏರಬೇಕಿದ್ದ ಪೊಲೀಸ್ ಸಿಬ್ಬಂದಿಯ ಬರ್ಬರ ಹತ್ಯೆ: ಮದುವೆ ಆಮಂತ್ರಣ ಪತ್ರಿಕೆ ಹಂಚಿ ಬರುವಾಗ ಅಡ್ಡಗಟ್ಟಿ ಕೊಲೆ

ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಬರ್ಬರ ಹತ್ಯೆ: ಮದುವೆ ಆಮಂತ್ರಣ ಪತ್ರಿಕೆ ಹಂಚಿ ಬರುವಾಗ ಅಡ್ಡಗಟ್ಟಿ ಕೊಲೆ ನ.11ರಂದು ಮದುವೆಯಾಗಬೇಕಿದ್ದ ಪೊಲೀಸ್ ಪೇದೆಯೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ದುದ್ದ ಗ್ರಾಮದ ಹೊರವಲಯದ ಡಾಬಾ ಸರ್ಕಲ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೊಲೆಯಾದ ಪೇದೆ ಬಾಗೇಶಪುರ ಗ್ರಾಮದ ನಿವಾಸಿ ಹರೀಶ್ ವಿ (32) ಎಂದು ಗುರುತಿಸಲಾಗಿದ್ದು, ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆಯಾದ ಹರೀಶ್ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಲ್ಲಿ…

Read More