POSTMANNEWS

ನೈಜ ಸುದ್ದಿ ನೇರ ಬಿತ್ತರ..

ಹಸೆಮಣೆ ಏರಬೇಕಿದ್ದ ಪೊಲೀಸ್ ಸಿಬ್ಬಂದಿಯ ಬರ್ಬರ ಹತ್ಯೆ: ಮದುವೆ ಆಮಂತ್ರಣ ಪತ್ರಿಕೆ ಹಂಚಿ ಬರುವಾಗ ಅಡ್ಡಗಟ್ಟಿ ಕೊಲೆ

ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಬರ್ಬರ ಹತ್ಯೆ: ಮದುವೆ ಆಮಂತ್ರಣ ಪತ್ರಿಕೆ ಹಂಚಿ ಬರುವಾಗ ಅಡ್ಡಗಟ್ಟಿ ಕೊಲೆ

ನ.11ರಂದು ಮದುವೆಯಾಗಬೇಕಿದ್ದ ಪೊಲೀಸ್ ಪೇದೆಯೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ದುದ್ದ ಗ್ರಾಮದ ಹೊರವಲಯದ ಡಾಬಾ ಸರ್ಕಲ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕೊಲೆಯಾದ ಪೇದೆ ಬಾಗೇಶಪುರ ಗ್ರಾಮದ ನಿವಾಸಿ ಹರೀಶ್ ವಿ (32) ಎಂದು ಗುರುತಿಸಲಾಗಿದ್ದು, ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕೊಲೆಯಾದ ಹರೀಶ್ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು.ಹರೀಶ್ ಅವರ ವಿವಾಹವು ನ.11ರಂದು ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ವಿವಾಹ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಿಕರಿಗೆ ಹಂಚಿ ಕಳೆದ ರಾತ್ರಿ ಮನೆಗೆ ಬೈಕಿನಲ್ಲಿ ಹಿಂದಿರುಗುತ್ತಿದ್ದ ಈ ಕೃತ್ಯ ಎಸಗಲಾಗಿದೆ. ದುಷ್ಕರ್ಮಿಗಳು ಅವರ ಬೈಕಿನ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ತಮ್ಮ ವಿವಾಹ ಕುರಿತಾದ ಆಮಂತ್ರಣ ಪತ್ರಿಕೆ ಸಂಬಂಧಿಕರಿಗೆ ನೀಡಿ ಬೈಕ್​​​ ಮೇಲೆ ವಾಪಸ್ ಬರುವಾಗ ಹಂತಕರು ಅಟ್ಯಾಕ್​ ಮಾಡಿ ಕೊಂದು ಹಾಕಿದ್ದಾರೆ.

ಹತ್ಯೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *