Headlines

ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಪೊಲೀಸರ ಬಂದೂಕು ಮತ್ತು ಲಾಟಿ ಮಾತನಾಡುತ್ತದೆ – ಹರತಾಳು ಹಾಲಪ್ಪ|halappa

ಯಾರೇ ಆಗಲಿ‌ ಕಾನೂನು ಕೈಗೆತ್ತಿಕೊಂಡರೆ ಪೊಲೀಸರ ಬಂದೂಕು ಮತ್ತು ಲಾಟಿ ಮಾತನಾಡುತ್ತದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದ್ದಾರೆ. ಸಾಗರದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೀಡಿದ ಬಜರಂಗ ದಳದ ಮುಖಂಡ ಸುನೀಲ್ ಮೇಲೆ ಹಲ್ಲೆ ಯತ್ನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು 18 ಗಂಟೆಯಲ್ಲಿ ಬಂಧಿಸಿದ್ದಾರೆ. ಘಟನೆ ಖಂಡಿಸಿ ಇಂದು ಸಾಗರ ಬಂದ್ ಕೂಡ ಶಾಂತಿಯುತವಾಗಿ ಯಶಸ್ವಿಯಾಗಿದೆ. ಹಲ್ಲೆಗೆ ಕಾರಣ ಏನೇ ಆಗಿರಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಂಥವರ ವಿರುದ್ಧ…

Read More

ರಿಪ್ಪನ್‌ಪೇಟೆ : ಅಧಿಕಾರಿಗಳ ನಿರ್ಲಕ್ಷ್ಯ – ನಾಡಕಛೇರಿ ಮುಂಭಾದಲ್ಲಿ ರಾರಾಜಿಸುತ್ತಿದೆ 2018 ರ ಚುನಾವಣೆಯ ಬ್ಯಾನರ್

ಅಧಿಕಾರಿಗಳ ನಿರ್ಲಕ್ಷ್ಯ – ನಾಡಕಛೇರಿ ಮುಂಭಾಗದಲ್ಲಿ ರಾರಾಜಿಸುತ್ತಿದೆ 2018 ರ ಚುನಾವಣೆಯ ಬ್ಯಾನರ್ ರಿಪ್ಪನ್‌ಪೇಟೆ;- ಐದು ವರ್ಷಕ್ಕೊಮ್ಮೆ ನಡೆಯುವ ವಿಧಾನಸಭಾ ಚುನಾವಣೆ ಕಳೆದು ಪುನ: ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿನ ನಾಡಕಛೇರಿ ಮತ್ತು ಗ್ರಾಮ ಪಂಚಾಯ್ತಿ ಕಛೇರಿ ಮುಂಭಾಗ ಇನ್ನೂ ಚುನಾವಣಾ ಅಯೋಗದವರು 2018 ರ ವಿಧಾನಸಭಾ ಚುನಾವಣೆ ಬ್ಯಾನರ್ ತಗೆಯದೇ ನಿರ್ಲಕ್ಷö್ಯ ವಹಿಸಿದ್ದಾರೆಂಬುದಕ್ಕೆ ಇಲ್ಲಿ ರಾರಾಜಿಸುತ್ತಿರುವ ಹಳೆಯ ಬ್ಯಾನರ್‌ಗಳೇ ಸಾಕ್ಷಿಕರಿಸುತ್ತಿವೆ. ಈಗಾಗಲೇ 2023 ರ ವಿಧಾನಸಭಾ ಚುನಾವಣೆ ಪ್ರಕಟಗೊಂಡು ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದರೂ…

Read More

ಮಲೆನಾಡಿನಲ್ಲಿ ವೈಭವಪೂರ್ಣವಾಗಿ ಜರುಗಿದ ಭೂಮಿ ಹುಣ್ಣಿಮೆ ಹಬ್ಬ

ಮಲೆನಾಡಿನಲ್ಲಿ ವೈಭವಪೂರ್ಣವಾಗಿ ಜರುಗಿದ ಭೂಮಿ ಹುಣ್ಣಿಮೆ ಹಬ್ಬ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಇಂದು ಶ್ರದ್ದಾಭಕ್ತಿಯಿಂದ ಆಚರಿಸಿದರು. ಗರ್ಭಿಣಿಯಂತೆ ಬೆಳೆಗಳಿಂದ ಮೈತುಂಬಿಕೊಂಡಿರುವ ವಸುಂಧರೆಗಿಂದು ವಿಜೃಂಭಣೆಯಿಂದ ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು ಆಕೆಗೆ ಶ್ರದ್ದಾಭಕ್ತಿಯಿಂದ ಸೀಮಂತದ ಕಾರ್ಯವನ್ನು ನೆರವೇರಿಸಿ ಸಂಭ್ರಮಿಸಿದರು. ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದ್ದಾಗಿದ್ದು ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿತುಂಬುತ್ತಾರೆ. ಭೂಮಿ ಹುಣ್ಣಿಯ…

Read More

ಕಾರ್ಮಿಕ ಸಾವನ್ನಪ್ಪಿದ ಸುದ್ದಿ ಮನೆಯವರಿಗೆ ತಿಳಿಸಲು ಹೋದ ಮಾಲೀಕನೂ ಹೃದಯಾಘಾತದಿಂದ ಸಾವು :

ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಸಾವನ್ನಪ್ಪಿದ. ಕಾರ್ಮಿಕ ಸಾವನ್ನಪ್ಪಿದ್ದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲುಕುವ ಘಟನೆ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರಗ ಗೇಟ್ ಸಮೀಪ ನಡೆದಿದೆ. ಕೂಲಿ ಕಾರ್ಮಿಕ ಬರ್ಮಪ್ಪ (55) ಎಂಬಾತ ಎಂದಿನಂತೆ ನಿವೃತ್ತ ಶಿಕ್ಷಕ ದುಗ್ಗಪ್ಪಗೌಡ(75) ಎಂಬುವರ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ.ಅನೇಕ ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಕೂಡ ಮಾಡುತ್ತ ಇದ್ದ ಮದ್ಯಾಹ್ನದವರೆಗೆ ಲವಲವಿಕೆಯಿಂದ…

Read More

ಕೆಂಪು ಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ : ಸಚಿವ ಕೆ ಎಸ್ ಈಶ್ವರಪ್ಪ

ಈಶ್ವರಪ್ಪ  ಮತ್ತೆ ತಮ್ಮ ಹೇಳಿಕೆಯಿಂದ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿಯ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವನ್ನು ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ನೀಡಿದ್ದ ಧ್ವಜದ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಈಶ್ವರಪ್ಪ, ಕೇಸರಿ ಧ್ವಜ ಕೆಂಪುಕೋಟೆ ಮೇಲೆ ಕೂಡ ಹಾರಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ನಮ್ಮ ದೇಶದಲ್ಲಿ ಕೇಸರಿ ಧ್ವಜವೇ ರಾಷ್ತ್ರ ಧ್ವಜವಾಗಬಹುದು. ಹಿಂದೆ ರಾಮ ಮಂದಿರ ಕಟ್ಟಲು ಆಗಲ್ಲ ಅಂದಿದ್ದರು ಈಗ ಕಟ್ಟಿಲ್ಲವ, ಹಾಗೇಯೇ ಮುಂದೊಂದು ದಿನ ಕೆಂಪು ಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದರು. ಅಧಿಕಾರದ…

Read More

SHIVAMOGGA | ‘ಅಕ್ಕ ಪಡೆ’ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ

SHIVAMOGGA | ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ ತಂಡ ರಚನೆ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ತಂಡಕ್ಕೆ ಎನ್ ಸಿ ಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿನವರಾಗಿದ್ದು,…

Read More

ಪತ್ರಿಕಾ ರಂಗವು ಸಾರ್ವಜನಿಕರ ಧ್ವನಿಯಾಗಿ ಅವರ ಕುಂದು ಕೊರತೆಗಳನ್ನು ಸರ್ಕಾರಕ್ಕೆ ತಿಳಿಸುವಂತಾಗಬೇಕು : ಆರಗ ಜ್ಞಾನೇಂದ್ರ

ಹೊಸನಗರ : ಇಂದಿನ ದಿನದಲ್ಲಿ ಗ್ರಾಮೀಣ ಪತ್ರಿಕೋದ್ಯಮ ಪರಿಣಾಮಕಾರಿಯಾಗಿದ್ದು.. ಇಲ್ಲಿಯ ವರದಿಗಳು ರಾಜ್ಯಮಟ್ಟದ ಪತ್ರಿಕೆಗಳ ಮುಖಪಟದಲ್ಲಿ ಮನ್ನಣೆ ಪಡೆಯುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ ಪಟ್ಟರು. ಭಾನುವಾರದಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹೊಸನಗರ ತಾ. ಶಾಖೆ, ಇವರಿಂದ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಆಯೋಜಿಸಿದ್ದ, ಪತ್ರಿಕಾ ದಿನಾಚರಣೆ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬಂತೆ ಪತ್ರಿಕಾ ರಂಗವು 4 ನೇ ಅಂಗವಾಗಿದೆ….

Read More

ಹೊಸನಗರ ಸಮೀಪ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ : ಕಾರು ಚಾಲಕ ಶ್ರೀರಾಮ್ ಫ಼ೈನಾನ್ಸ್ ಉದ್ಯೋಗಿ ಸ್ಥಳದಲ್ಲೆ ಸಾವು :

ಹೊಸನಗರ: ಮಾರುತಿಪುರ ಸಮೀಪ ಹೊಸಕೆಸರೆ-  ದರೋಡೆಕಾನ್  ಸಮೀಪ ಸರಕು ತುಂಬಿದ ಲಾರಿ  ಹಾಗೂ ಮಾರುತಿ ಆಲ್ಟೊ ಕಾರಿನ ಮದ್ಯೆ ನಿನ್ನೆ ರಾತ್ರಿ ಸುಮಾರು 10-30 ರ ಸಮಯದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಅಪಘಾತದ ರಭಸಕ್ಕೆ ಕಾರು ಸಂಪೂರ್ಣ  ನಜ್ಜು – ಗುಜ್ಜಾಗಿದ್ದು ಚಾಲಕ ವಿನಯ ಗೌಡ( 26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಚಾಲಕ ವಿನಯ ಗೌಡ ಸಾಗರದಲ್ಲಿ ಶ್ರೀರಾಮ್ ಫೈನಾನ್ಸ್ ಉದ್ಯೋಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಚಾಲಕ ವಿನಯ್ ಗೌಡ (26) ಬಾಣಿಗದಿಂದ ಊಟವನ್ನು ಮುಗಿಸಿಕೊಂಡು ಸಾಗರಕ್ಕೆ…

Read More

ಆನಂದಪುರ : ಮೂರು ಮುತ್ತು ಕಲಾವಿದರಿಗೆ ಕಸಾಪ ಹಾಗೂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ವತಿಯಿಂದ ಸನ್ಮಾನ

ಆನಂದಪುರ : ಮೂರು ಮುತ್ತು ಕಲಾವಿದರನ್ನು ಪಟ್ಟಣದ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್  ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರೂಪಕಲಾ (ಕುಳ್ಳಪ್ಪು) ತಂಡದವರಿಂದ ಆನಂದಪುರ ಸಮೀಪದ ಮಲಂದೂರಿನಲ್ಲಿ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ  ಕಳೆದ 28 ವರ್ಷಗಳಿಂದ ದೇಶ ವಿದೇಶಗಳಲ್ಲೂ ಕನ್ನಡ  ಹಾಸ್ಯಮಯ ನಾಟಕ ಪ್ರದರ್ಶನಗಳನ್ನು ನಡೆಸಿರುವ ಕುಳ್ಳಪ್ಪು ತಂಡ ಇಲ್ಲಿಯ ತನಕ  2200 ನೇ ಮೂರು ಮುತ್ತು ನಾಟಕದ ಪ್ರದರ್ಶನ ಮಾಡಿರುತ್ತಾರೆ . ಇವರ ಸೇವೆಯನ್ನು ಗುರುತಿಸಿ …

Read More

ಕೊಳವಳ್ಳಿ ಕೋಮಲಕ್ಷ್ಮಮ್ಮ ನಿಧನ

ಕೊಳವಳ್ಳಿ ಕೋಮಲಕ್ಷ್ಮಮ್ಮ ನಿಧನ ರಿಪ್ಪನ್ ಪೇಟೆ: ಪಟ್ಟಣದ ಸಾಗರ ರಸ್ತೆ ನಿವಾಸಿ ಕೋಮಲಕ್ಷಮ್ಮ (85)  ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೊಳವಳ್ಳಿ ರಾಜೇಶ್ (ಭತ್ತದ ರಾಜಣ್ಣ) ಹಾಗೂ ಕೊಳವಳ್ಳಿ ಉಮೇಶ್ ರವರ ತಾಯಿ ಕೋಮಲಕ್ಷ್ಮಮ್ಮ ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಸಂಜೆ ಸಾಗರ ರಸ್ತೆಯಲ್ಲಿರು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು , ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೊಳವಳ್ಳಿ…

Read More