ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಿಸಿದ ಆರ್ ಶಂಕರ್ | shiggav

ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಿಸಿದ ಆರ್ ಶಂಕರ್

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ಮಾಜಿ ಸಚಿವ ಆರ್ ಶಂಕರ್ ವಿತರಿಸಿದರು.

ಶಿಗ್ಗಾವಿ ಸವಣೂರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಆರ್ ಶಂಕರ್ ಬಡ ಮಕ್ಕಳಿಗೆ ಸತತವಾಗಿ ಕ್ಷೇತ್ರದಲ್ಲಿ ಅನೇಕ ಸ್ಕೂಲ್ ಗಳಿಗೆ ಬ್ಯಾಗ್ ಗಳನ್ನು ಕೊಡುತ್ತಿರುವ ಶಿಕ್ಷಣ ಪ್ರೇಮಿಯಾಗಿದ್ದು, ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.

ಈ ಸಂದರ್ಭದಲ್ಲಿ ರಾಜು ಅಡಿವಪ್ಪನವರ್, ಯುವ ಮುಖಂಡ ಸಂತೋಷ್ ಚಾಗಲಬ್ಬಿ, ಸತ್ತಾರಅಹಮ್ಮದ್ ತಿಳುವಳ್ಳಿ, ಗೌಸ್ ಆಗಸನಮಟ್ಟಿ, ಶಾಲೆಯ ಮುಖ್ಯೋಪಾಧ್ಯರು ಸಹ ಶಿಕ್ಷಕರು ಉಪಸ್ಥಿತರಿದ್ದರು.


 ವರದಿ  :  ನಿಂಗರಾಜ್ ಕೊಡಲ್ ಹಾವೇರಿ ಜಿಲ್ಲೆ ಬಂಕಾಪುರ

Leave a Reply

Your email address will not be published. Required fields are marked *