ರಿಪ್ಪನ್ಪೇಟೆ : ಪಟ್ಟಣದ ವಿನಾಯಕನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ 27ನೇ ವರ್ಷದ ಅಯ್ಯಪ್ಪ ಸ್ವಾಮಿ ಯಾತ್ರೆಯ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಉತ್ಸವ ಕಾರ್ಯಕ್ರಮ 03-12-23 ರ ಭಾನುವಾರದಂದು ನಡೆಯಲಿದೆ.
ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯನ್ನು ತೀರ್ಥೇಶ್ ಗುರುಸ್ವಾಮಿ, ರಮೇಶ್ ಗುರುಸ್ವಾಮಿ ಮತ್ತು ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಗುವುದು.
ಅಂದು ಬೆಳಗ್ಗೆ 8ಕ್ಕೆ ಗಣಪತಿ ಪೂಜೆ , 08-30 ಕ್ಕೆ ಸುಬ್ರಹ್ಮಣ್ಯ ಪೂಜೆ , 09 ಕ್ಕೆ ಇರುಮುಡಿ ಕಟ್ಟುವುದು , ಮಧ್ಯಾಹ್ನ 12ಕ್ಕೆ ದುರ್ಗಾಪರಮೇಶ್ವರಿ ಪೂಜೆ , 12.30ಕ್ಕೆ ಅಯ್ಯಪ್ಪ ಸ್ವಾಮಿ ಅಲಂಕಾರ ಪೂಜೆ ,ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗುವುದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.