MENs DAY | ಹೊಸನಗರದಲ್ಲಿ ಪುರುಷ ದಿನಾಚರಣೆ ಸಂಭ್ರಮ
ಹೊಸನಗರದಲ್ಲಿ ಪ್ರಪ್ರಥಮವಾಗಿ ಕ್ರೈಸ್ತ ಯುವತಿ ಮಂಡಳಿಯವರಿಂದ ಪುರುಷ ದಿನಾಚರಣೆ ಸಂಭ್ರಮ
ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದ ಸಭಾಂಗಣದಲ್ಲಿ ಇಂದು ಕ್ರೈಸ್ತ ಯುವತಿ ಸಂಘದವರು ಹೊಸನಗರದಲ್ಲಿ ಪ್ರಪ್ರಥಮವಾಗಿ ಪುರುಷರ ದಿನಾಚರಣೆಯನ್ನು ಆಚರಿಸಿದರು
ಸಮಾರಂಭವನ್ನು ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ರೆ ಫಾ ಸೈಮನ್ ಹೊರಟರವರು ದೀಪ ಬೆಳಗಿ ಉದ್ಘಾಟಿಸಿ ಪುರುಷರ ತ್ಯಾಗ ಮನೋಭಾವ ಬೆಲೆಕಟ್ಟಲಾಗದಂತಹ ಆಸ್ತಿಯಾಗಿದ್ದಾರೆ.ಪುರುಷರು ಸಂಬಂಧ ಭಾವನೆಗಳ ಮೂಲಕ ಆದರ್ಶ ಪ್ರಾಯರಾಗಿ ಸದೃಢ ಕುಟುಂಬ ರೂಪಿಸಿಕೊಂಡು ಉತ್ತಮ ಜೀವನ ನಡೆಸುವಂತೆ ಕರೆ ನೀಡಿದರು
ಪುರುಷರ ದಿನಾಚರಣೆ ಅಂಗವಾಗಿ ಯುವತಿ ಮಂಡಳಿಯವರು ವಿಶೇಷ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು
ಕಾರ್ಯಕ್ರಮದಲ್ಲಿ ಹಿರಿಯ ಧರ್ಮಗುರುಗಳಾದ ರೆ ಫಾ ಅಂತೋನಿ ಡಿಸೋಜ ರೆ ಫಾ ರೋಮನ್ಪಿಂಟೋ ಹೋಲಿ ರೆಡಿಮರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ರುಫಿನಾ ಪೀಟರ್ ಸಿಕ್ವೇರಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅನಿತಾ ಪಿಂಟೋ ಸ್ವಾಗತಿಸಿದರೆ ಪಟ್ಟಣ ಪಂಚಾಯತಿ ಸದಸ್ಯೆ ಸಿಂಥಿಯಾ ಕಾರ್ಯಕ್ರಮ ನಿರೂಪಿಸಿದರು


