ಕಿಮ್ಮನೆ ರತ್ನಾಕರ್ ಗೆ ಅಪಮಾನ : ರೈತ ಮಹಿಳೆ ವಿರುದ್ಧ ದೂರು ದಾಖಲು | Thirthahalli

ಕಿಮ್ಮನೆ ರತ್ನಾಕರ್ ಗೆ ಅಪಮಾನ : ರೈತ ಮಹಿಳೆ ವಿರುದ್ಧ ದೂರು ದಾಖಲು


ತೀರ್ಥಹಳ್ಳಿ : ಪಟ್ಟಣದ ಸಮೀಪದ ಭೀಮನಕಟ್ಟೆಯಲ್ಲಿ ತುಂಗಾನದಿ ತೀರದ ಆಲಗೇರಿ ಎಂಬಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯ ಶುದ್ದೀಕರಣ ಘಟಕದ ಕಾಮಗಾರಿ ನಡೆಯುತ್ತಿದೆ. ಶಾಸಕ ಆರಗ ಜ್ಞಾನೇಂದ್ರ ಇವರ ಉಸ್ತುವಾರಿಯಲ್ಲಿ ನ್ಯಾಷನಲ್ ಕನ್‌ಸ್ಟಕ್ಷನ್‌ ಸಂಸ್ಥೆ ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ.

ಈ ಕಾಮಗಾರಿಯನ್ನು ಇಲ್ಲಿನ ಸ್ಥಳೀಯ ಕೆಲವು ಸಂಘಟನೆಗಳು ವಿರೋಧಿಸುತ್ತಿವೆ.

ಈ ಸಂಬಂಧ ಫೆಬ್ರವರಿ 26ರಂದು ಹೆಗ್ಗೋಡು ಶಾಲಾ ಮುಂಭಾಗ ಪ್ರತಿಭಟನೆಗಳು ನಡೆದಿವೆ. ಈ ಸಂದರ್ಭ ಮಧ್ಯಾಹ್ನ 12-30 ರ ಸುಮಾರಿಗೆ ಮಾದ್ಯಮದವರೊಂದಿಗೆ ಮಾತನಾಡಿದ ಸ್ಥಳೀಯರಾದ ಶಾಂತಾ ಕೋಂ ಗಿರೀಶ ಎನ್ನುವವರು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ರವರಿಗೆ ಹೀನಾಯವಾಗಿ ಬೈದು ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.

“ಕಿಮ್ಮನೆ ಎಲ್ಲಿ ಸತ್ತಿದ್ದಾನೆ, ಅವನು ಓಟು ಕೇಳಲು ಬರಲಿ, ಅವನಿಗೆ ಚಪ್ಪಲಿಯಿಂದ ಹೊಡೆಯಿರಿ” ಅಂತ ಅವಹೇಳನಾಕಾರಿಯಾಗಿ ನಿಂದಿಸಿ ಜನರನ್ನು ಎತ್ತಿಕಟ್ಟಿ ಶಾಂತಿ ಭಂಗಕ್ಕೆ ಪ್ರಯತ್ನಿಸಿದ್ದಾರೆ. ಘಟನೆಗೆ ಸಂಬಂಧ ಕಿಮ್ಮನೆ ರತ್ನಾಕರ್‌ಗೆ ಅವಹೇಳನ ಮಾಡಿ ನಿಂದಿಸಿರುವ ವೀಡಿಯೋ ಕ್ಲಿಪ್‌ಗಳನ್ನು ಈ ದೂರು ಅರ್ಜಿಯ ಜೊತೆ ಲಗತ್ತಿಸಿ ಮಹಿಳೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗುಂಬೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *