Headlines

ಆನಂದಪುರ : ಮೂರು ಮುತ್ತು ಕಲಾವಿದರಿಗೆ ಕಸಾಪ ಹಾಗೂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ವತಿಯಿಂದ ಸನ್ಮಾನ

ಆನಂದಪುರ : ಮೂರು ಮುತ್ತು ಕಲಾವಿದರನ್ನು ಪಟ್ಟಣದ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್  ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ರೂಪಕಲಾ (ಕುಳ್ಳಪ್ಪು) ತಂಡದವರಿಂದ ಆನಂದಪುರ ಸಮೀಪದ
ಮಲಂದೂರಿನಲ್ಲಿ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ  ಕಳೆದ 28 ವರ್ಷಗಳಿಂದ ದೇಶ ವಿದೇಶಗಳಲ್ಲೂ ಕನ್ನಡ  ಹಾಸ್ಯಮಯ ನಾಟಕ ಪ್ರದರ್ಶನಗಳನ್ನು ನಡೆಸಿರುವ ಕುಳ್ಳಪ್ಪು ತಂಡ ಇಲ್ಲಿಯ ತನಕ  2200 ನೇ ಮೂರು ಮುತ್ತು ನಾಟಕದ ಪ್ರದರ್ಶನ ಮಾಡಿರುತ್ತಾರೆ . ಇವರ ಸೇವೆಯನ್ನು ಗುರುತಿಸಿ  ಕಲಾವಿದರಾದ ಸತೀಶ್ ಪೈ .ಸಂತೋಷ್ ಪೈ ಅಶೋಕ್ ಶ್ಯಾನಬೋಗ ರವರನ್ನು ಗೌರವಿಸಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಬಿ ಡಿ ರವಿಕುಮಾರ್ ಅಧ್ಯಕ್ಷರು ಕಸಾಪ ಆನಂದಪುರ,
ರಾಜೇಂದ್ರಗೌಡ ಅಧ್ಯಕ್ಷರು ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ,
ಗಣಪತಿ,ಗುರುಪ್ರಸಾದ್ ರಾಜೇಶ್ ಗೋಪಾಲ್ ,ಗಿರೀಶ್ , ರಾಘವೇಂದ್ರ ಅಚಾರ್ಯ.ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *