ಭಾರಿ ಗಾಳಿ ಮಳೆಗೆ ಮನೆಯ ಗೋಡೆ ಮೇಲ್ಚಾವಣಿ ಕುಸಿತ | ರಿಪ್ಪನ್‌ಪೇಟೆಯ ಹೂವಿನ ವ್ಯಾಪಾರಿ ಪುಷ್ಪಾ ನಿಧನ|Rpet

ರಿಪ್ಪನ್‌ಪೇಟೆ : ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇದರ ಪರಿಣಾಮ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಕಲ್ಯಾಣಪುರದಲ್ಲಿ ಮನೆಯೊಂದರ ಗೋಡೆ ಹಾಗೂ ಮೇಲ್ಚಾವಣಿ ಕುಸಿತವಾಗಿರುವ ಘಟನೆ ನಡೆದಿದೆ.


ಇಂದು ಸುರಿದ ಭಾರಿ ಮಳೆಗೆ ಕಲ್ಯಾಣಪುರ ಗ್ರಾಮದ ಕೃಷ್ಣ ಹೆಗಡೆ  ಎಂಬುವವರ ಮನೆಯ ಹಿಂಬದಿಯ ಗೋಡೆ ಹಾಗೂ‌ ಮೇಲ್ಚಾವಣಿ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ.

ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ರಿಪ್ಪನ್‌ಪೇಟೆಯ ಹೂವಿನ ವ್ಯಾಪಾರಿ ಪುಷ್ಪಾ ನಿಧನ :

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಹೂವಿನ ವ್ಯಾಪಾರ ನಡೆಸುತಿದ್ದ ಪುಷ್ಪಾ ಎಂಬುವವರು ಹೃದಯಾಘಾತದಿಂದ ಶಿವಮೊಗ್ಗದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಹೂವಿನ ವ್ಯಾಪಾರಿಯಾಗಿದ್ದ ಇವರು ಜನಮನ್ನಣೆ ಗಳಿಸಿದ್ದರು.ಮೃತರ ಅಂತ್ಯಕ್ರಿಯೆ ಶಿವಮೊಗ್ಗದ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *