w
Headlines
Home » ಜಿಂಕೆ ಶಿಕಾರಿ ಮಾಡಿ ಮಾಂಸ ಪಾಲು ಮಾಡುತಿದ್ದ ಇಬ್ಬರ ಬಂಧನ !|arrested

ಜಿಂಕೆ ಶಿಕಾರಿ ಮಾಡಿ ಮಾಂಸ ಪಾಲು ಮಾಡುತಿದ್ದ ಇಬ್ಬರ ಬಂಧನ !|arrested

ಜಿಂಕೆ ಶಿಕಾರಿ ಮಾಡಿ ಮಾಂಸ ಪಾಲು ಮಾಡುತಿದ್ದ ಇಬ್ಬರ ಬಂಧನ !

ತೀರ್ಥಹಳ್ಳಿ: ತಾಲೂಕಿನ ಮಂಡಗದ್ದೆ ವಲಯ ವ್ಯಾಪ್ತಿಯ ಕುಳ್ಳುಂಡೆ ಗ್ರಾಮದ ಶೇಡ್ ನಲ್ಲಿ ಅಕ್ರಮವಾಗಿ ಜಿಂಕೆಯನ್ನು ಶಿಕಾರಿ ಮಾಡಿ ಮಾಂಸಕ್ಕಾಗಿ ಕಡಿಯುತ್ತಿರುವ ಸಂದರ್ಭದಲ್ಲಿ ಮಂಡಗದ್ದೆ ವಲಯ ಅಧಿಕಾರಿ ಆದರ್ಶ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನೆಡೆಸಿರುವ ಘಟನೆ ಮಂಗಳವಾರ ರಾತ್ರಿ ನೆಡೆದಿದೆ.

ದಾಳಿ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಜಿಂಕೆ ಮಾಂಸ ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ .

ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್  ಮತ್ತು ಆರ್ ಎಫ್ ಒ ಆದರ್ಶ ಇವರುಗಳ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸುಹಾಸ್,  ಗಸ್ತು ಅರಣ್ಯ ಪಾಲಕರದ ದುರ್ಗಪ್ಪ ಡಿ, ಸಂತೋಷ್ ಕುಮಾರ್ ಮತ್ತು ವಲಯದ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.