Headlines

ಹೊಸನಗರ ಸಮೀಪ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ : ಕಾರು ಚಾಲಕ ಶ್ರೀರಾಮ್ ಫ಼ೈನಾನ್ಸ್ ಉದ್ಯೋಗಿ ಸ್ಥಳದಲ್ಲೆ ಸಾವು :

ಹೊಸನಗರ: ಮಾರುತಿಪುರ ಸಮೀಪ ಹೊಸಕೆಸರೆ-  ದರೋಡೆಕಾನ್  ಸಮೀಪ ಸರಕು ತುಂಬಿದ ಲಾರಿ  ಹಾಗೂ ಮಾರುತಿ ಆಲ್ಟೊ ಕಾರಿನ ಮದ್ಯೆ ನಿನ್ನೆ ರಾತ್ರಿ ಸುಮಾರು 10-30 ರ ಸಮಯದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಅಪಘಾತದ ರಭಸಕ್ಕೆ ಕಾರು ಸಂಪೂರ್ಣ  ನಜ್ಜು – ಗುಜ್ಜಾಗಿದ್ದು ಚಾಲಕ ವಿನಯ ಗೌಡ( 26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನ ಚಾಲಕ ವಿನಯ ಗೌಡ ಸಾಗರದಲ್ಲಿ ಶ್ರೀರಾಮ್ ಫೈನಾನ್ಸ್ ಉದ್ಯೋಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಚಾಲಕ ವಿನಯ್ ಗೌಡ (26) ಬಾಣಿಗದಿಂದ ಊಟವನ್ನು ಮುಗಿಸಿಕೊಂಡು ಸಾಗರಕ್ಕೆ ತೆರಳುತ್ತಿದ್ದಾಗ ರಾತ್ರಿ 10-30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 
ಅಪಘಾತದ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು ಭತ್ತದ ಚೀಲಗಳು ಹೆದ್ದಾರಿ ಮೇಲೆ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *