ಹಲವು ದಶಕದ ಸಮಸ್ಯೆ ಕೇವಲ ಭರವಸೆಯಲ್ಲೆ ಕಳೆಯಿತು:ಸೇತುವೆ ಇಲ್ಲದೇ ಹಳಿಯೂರು ಗ್ರಾಮಸ್ಥರ ನರಕಯಾತನೆ
ರಿಪ್ಪನ್ ಪೇಟೆ: ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಗವಟೂರು ಗ್ರಾಮದ ಹಳಿಯೂರು (ಮತ್ತಿಮನೆ, ಸಂಪಳ್ಳಿ ಸಂಪರ್ಕ)ಭಾಗದ ಜನರು ಕಳೆದ 60 ವರ್ಷಗಳಿಂದ ಸೇತುವೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ದಿನ ನಿತ್ಯದ ವಸ್ತುಗಳನ್ನು ಖರೀದಿಸುವರು, ಶಾಲೆಗೆ ಹೋಗುವ ಮಕ್ಕಳು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗೋಕೆ ಆಗದೇ ಪರದಾಡುತ್ತಿರುವ ಊರಿನ ಜನರು, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ ಇತ್ಯಾದಿ ಮೂಲಭೂತ ಸೌಕರ್ಯಗಳ ಸಮಯಕ್ಕೆ ಸರಿಯಾಗಿ ಪಡೆಯಲು ಕೃಷಿಕರು ಸೇತುವೆ ಇಲ್ಲದೆ ಸಂಕಟಪಡುತ್ತಿದ್ದಾರೆ. ಗ್ರಾಮಸ್ಥರು ಸೇತುವೆ ರಸ್ತೆ ಇಲ್ಲದೆ ಬೇಸತ್ತು…