w
Headlines
Home » ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕ : ಅರ್ ಎ ಚಾಬುಸಾಬ್

ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕ : ಅರ್ ಎ ಚಾಬುಸಾಬ್

ರಿಪ್ಪನ್ ಪೇಟೆ : ಕೇಂದ್ರ ಸರ್ಕಾರದ ಈ ವರ್ಷದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಬಡವರ ಮತ್ತು ಮಧ್ಯಮ ವರ್ಗದವರ ನಿರೀಕ್ಷೆಯನ್ನು ಹುಸಿ ಯನ್ನಾಗಿ ಮಾಡಿದೆ ಎಂದು ರಾಜ್ಯ ಜ್ಯಾತ್ಯಾತೀತ ಜನತಾದಳದ ಮಾಜಿ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

 ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕಿನಿಂದ ಎರಡು ವರ್ಷಗಳಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ, ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಜನರಿಗೆ ಏನಾದ್ರೂ ಕೊಡುಗೆ ಸಿಗುತ್ತೆ ಎಂಬ ನಿರೀಕ್ಷೆಯಿತ್ತು, ಆದರೆ ಈ ಬಜೆಟ್ ಬಡವರ, ಜನಸಾಮಾನ್ಯರ ಪರ ಇಲ್ಲ. ತೆರಿಗೆಯನ್ನ ಕಂಟಿನ್ಯೂ ಮಾಡಲಾಗಿದೆ. ಇದರಿಂದ ಜನರಿಗೆ ಮತ್ತೆ ಸಂಕಷ್ಟವಾಗಿದೆ.ಇನ್ನು, ಇದು ಬಜೆಟ್ ಅಲ್ಲ. ಬದಲಿಗೆ ಸಂಸದರನ್ನು ಕೂರಿಸಿಕೊಂಡು ಒಂದು ರಿಪೋರ್ಟ್ ಹೇಳಿದಂತೆ ಇದೆ. ಈ ಬಜೆಟ್​ ಭರವಸೆ ಮೂಡಿಸಿಲ್ಲ, ಇದರಲ್ಲಿ ಉಪ್ಪು, ಹುಳಿ, ಖಾರ ಏನು ಇಲ್ಲ ಎಂದರು. ಬಜೆಟ್​ನಲ್ಲಿ ಆದರೆ ಬಡವರಿಗೆ, ಮಧ್ಯಮ ವರ್ಗಕ್ಕೆ ಏನು ಮಾಡಿಲ್ಲ, ಕರ್ನಾಟಕಕ್ಕೆ ಏನು ಸಿಕ್ಕಿಲ್ಲ.  ಕೃಷ್ಣಾ ಮೇಲ್ದಂಡೆ, ರೈಲು ಯೋಜನೆಗಳಿಗೆ ಹಣ ಕೊಟ್ಟಿಲ್ಲ, ಮಹದಾಯಿ ವಿಚಾರವಾಗಿ ಚರ್ಚೆಯಾಗಿಲ್ಲ, ಇದು ನಿರಾಶದಾಯಕ ಬಜೆಟ್​ ಎಂದರು.

ದೇಶದಲ್ಲಿ ದುಡಿಯುವ ಮತ್ತು ಮದ್ಯಮ ವರ್ಗ ನಿರೀಕ್ಷೆ ಇಟ್ಟಿತ್ತು.ಕೋವಿಡ್ ನಿಂದ ನರಳಿದ ದುಡಿಯುವ ವರ್ಗ ಪರಿಹಾರ ಸಿಗುತ್ತದೆ ಎಂದು ನಿರೀಕ್ಷೆ ಮಾಡಿತ್ತು. ನೇರ ತೆರಿಗೆಯನ್ನು ಮುಂದುವರೆಸಿದೆ. ಕೋವಿಡ್ ಸಂದರ್ಭದಲ್ಲೂ ಯಥಾಸ್ಥಿತಿ ಮುಂದುವರಿಸಿದೆ. ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ. ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿ ಹುಸಿ ಮಾಡಿದ್ದಾರೆ.ಆರೋಗ್ಯ, ಶಿಕ್ಷಣ, ಕೃಷಿ ಈ ಕ್ಷೇತ್ರದ ಉತ್ತೇಜನ ನೀಡುವ ಯೋಜನೆ ಘೋಷಣೆಯಾಗುತ್ತವೆ ಎಂಬ ನಿರೀಕ್ಷೆ ಇತ್ತು. ಕಳೆದ ವರ್ಷ 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಸೈಜ್ ಮಂಡಿಸಿದ್ದರು.ಈ ವರ್ಷ 39.45 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. 4ಲಕ್ಷದ 61 ಸಾವಿರ ಕೋಟಿ ರೂಪಾಯಿ ಹೆಚ್ಚಳದ ಬಜೆಟ್ ಘೋಷಣೆ ಮಾಡಿದ್ದಾರೆ.ವರ್ಷಕ್ಕೆ 11ಲಕ್ಷದ 87 ಸಾವಿರದ 180 ಕೋಟಿ ರೂಪಾಯಿಗಳನ್ನ ಸಾಲ ಮಾಡುತ್ತಿದ್ದಾರೆ. ಅಸಲು ಮತ್ತು ಬಡ್ಡಿ ಬಜೆಟ್ ಭಾಗ, ಸಾಲಕ್ಕೆ ಬಡ್ಡಿಗೆ ಹೋಗುತ್ತದೆ.ವಾರ್ಷಿಕವಾಗಿ 9 ಲಕ್ಷದ 40 ಸಾವಿರದ 651 ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ ಎಂದರು.

ಉನ್ನತ ಶಿಕ್ಷಣಕ್ಕೆ ನ್ಯಾಷನಲ್ ಎಜುಕೇಶನಲ್ ಪಾಲಿಸಿ ಬೇರೆ ತಂದಿದ್ದಾರೆ.4779 ಕೋಟಿ ರೂಪಾಯಿ ಗಳನ್ನ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಾಡಿದ್ದಾರೆ. ಒಟ್ಟಾರೆ  ಒಟ್ಟಾರೆ ಈ ಬಾರಿಯ ಬಜೆಟ್ ದೇಶದ ಬಡವರು ಮತ್ತು ಮಧ್ಯಮ ವರ್ಗದವರಿಗೆ ನಿರಾಸೆ ಉಂಟು ಮಾಡಿದ್ದಾರೆ ಎಂದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.