Headlines

ರಿಪ್ಪನ್ ಪೇಟೆ : ಕಾರಿನ ಟೈರ್ ಸ್ಪೋಟಗೊಂಡು ಸರಣಿ ಅಪಘಾತ : ಇಬ್ಬರಿಗೆ ಗಂಭೀರ ಗಾಯ : ಮೆಗ್ಗಾನ್ ಗೆ ದಾಖಲು

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಬಳಿ ಚಲಿಸುತ್ತಿದ್ದ ಮಾರುತಿ ಬ್ರೀಜಾ ಕಾರಿನ ಮುಂಭಾಗದ ಎರಡು ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತಿದ್ದ ಎರಡು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.


ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಮಾರುತಿ ಬ್ರೀಜಾ ಕಾರಿನ ಮುಂದಿನ ಎರಡು ಟೈರ್ ಸ್ಪೋಟಗೊಂಡ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಬರುವೆ ಗ್ರಾಮದ ನಿವಾಸಿ ತಿಮ್ಮಪ್ಪ (40) ಇವರ ಬಜಾಜ್ ಡಿಸ್ಕವರ್ ಬೈಕ್ ಗೆ ಹಾಗೂ ಗುಡ್ ಶಫರ್ಡ್ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ  ಕೆಂಚನಾಲ ನಿವಾಸಿ ಅನ್ಸರ್ (42) ಟಿವಿಎಸ್ ಸ್ಪೋರ್ಟ್ಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ಸವಾರರಿಗೆ ತೀವ್ರವಾದ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.


ಬರುವೆ ಗ್ರಾಮದ ತಿಮ್ಮಪ್ಪ ಎಂಬುವವರಿಗೆ ತಲೆಗೆ ತೀವ್ರವಾದ ಪೆಟ್ಟಾಗಿದೆ ಹಾಗೂ ಕೆಂಚನಾಲ ನಿವಾಸಿ ಅನ್ಸರ್ ರವರ ಬಲಗಾಲಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇👇 :::




Leave a Reply

Your email address will not be published. Required fields are marked *