ಕೊಳಕು ಮಂಡಲ ಹಾವು ಕಚ್ಚಿ ಜೀವನದ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸರಗುಂದದ ಬಡ ವಿದ್ಯಾರ್ಥಿಯ ಬದುಕು:
ಆನಂದಪುರ: ಓದಿ ಜೀವನದಲ್ಲಿ ಉನ್ನತ ಹುದ್ದೆಗೇರುವ ಕನಸು ಕಂಡಿದ್ದಂತಹ ವಿದ್ಯಾರ್ಥಿಯ ಬದುಕಲ್ಲಿ ಇದೀಗ ಕತ್ತಲು ಆವರಿಸಿದಂತಾಗಿದೆ. ಇತರ ವಿದ್ಯಾರ್ಥಿಗಳಂತೆ ಆಟ ಪಾಠ ಕಲಿಯೋಣವೆಂದರೆ ನಡೆಯಲು ಬಾರದ ಪರಿಸ್ಥಿತಿಗೆ ಈ ವಿದ್ಯಾರ್ಥಿ ಈಗ ತಲುಪಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದನ ಎಂಬ ಹತ್ತನೇ ತರಗತಿ ಓದುತ್ತಿದ್ದ ಆ ವಿದ್ಯಾರ್ಥಿ ಮನೆಯ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕೊಳಕುಮಂಡಲ ಹಾವು ಕಚ್ಚಿ ಇದೀಗ ಕಾಲು ಕೊಳೆಯುವಂತಹ ಸ್ಥಿತಿ ಬಂದಿದೆ. ಮನೆಯಲ್ಲಿ ನೋಡಿದರೆ ಆರ್ಥಿಕ ಸ್ಥಿತಿ…