ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ::”ಸಮಾಜ ಸೇವೆಯಿಂದ ನೆಮ್ಮದಿಯ ಬದುಕು ಸಾಧ್ಯ “:::ಜೈ ವಿಠಲ್
ರಿಪ್ಪನ್ ಪೇಟೆ :ಸಮಾಜ ಸೇವೆಯ ಮೂಲಕ ಮಾನವ ತನ್ನ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಂಡು ಕೊಳ್ಳಬಹುದು ಎಂದು ರೋಟರಿ ಜಿಲ್ಲಾ ೩೧೮೨ ರ ಡಿಸ್ಟ್ರಿಕ್ಟ್ ಇಂಟಾರಾಕ್ಟ್ ಛೇರ್ಮನ್ ಪಿ.ಹೆಚ್.ಎಪ್.ಕೆ.ಎಸ್ ಜೈ ವಿಠಲ್ ಹೇಳಿದರು. ಪಟ್ಟಣದ ಜಿ.ಎಸ್.ಬಿ. ಕಲ್ಯಾಣಮಂದಿರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ೨೦೨೧-೨೦೨೨ ರ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದ ಅವರು ರೋಟರಿ ಸಂಸ್ಥೆ ಅಂತರ್ ರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಸ್ಥಾಪನೆಯ ಮೂಲ ಉದ್ದೇಶ…