ರಿಪ್ಪನ್ ಪೇಟೆ: ಶಾಸಕ ಹರತಾಳು ಹಾಲಪ್ಪರವರಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ ಸಮಾಜದವರಿಂದ ಒತ್ತಾಯ:
ರಿಪ್ಪನ್ಪೇಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮಾಜಿ ಸಚಿವ, ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ರಿಪ್ಪನ್ಪೇಟೆ ವೀರಶೈವಲಿಂಗಾಯತ ಸಮಾಜದ ಮುಖಂಡರುಗಳಾದ ಮೆಣಸೆ ಆನಂದ,ಕಮದೂರು ರಾಜಶೇಖರ್, ಹೆಚ್.ಎಸ್.ರವಿ ಹಾಲುಗುಡ್ಡೆ, ನೆವಟೂರು ದೇವೇಂದ್ರಪ್ಪಗೌಡ, ಯೋಗೇಂದ್ರಗೌಡ, ಜಿ.ಡಿ ಮಲ್ಲಿಕಾರ್ಜುನ, ಕಳಸೆ ಗಂಗಾಧರಗೌಡ ಒತ್ತಾಯಿಸಿದ್ದಾರೆ. ರಿಪ್ಪನ್ಪೇಟೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರುಗಳು ಹಾಲಪ್ಪನವರು ಹೊಸನಗರ-ಸಾಗರ-ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿ ಕಾರ್ಯನಿರ್ವಹಿಸಿದ್ದು ಅಲ್ಲದೆ ಶಾಸಕರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಜಾತಿ ಭೇದ ಭಾವ…