ರಿಪ್ಪನ್ ಪೇಟೆಯ ರೈತನ ಮಗನ ಚಿನ್ನದ ಬೇಟೆ ! ಗ್ರಾಮೀಣ ಯುವಕ ಚಿನ್ನ ಬೇಟೆಯಾಡಿದ್ದಾದರೂ ಎಲ್ಲಿ ? ಈ ಯುವಕನಿಗೆ ಕೃಷಿಸಚಿವ ಬಿ ಸಿ ಪಾಟೀಲ್ ಕಿವಿಯಲ್ಲಿ ಹೇಳಿದ್ದೇನು !!
ರಿಪ್ಪನ್ ಪೇಟೆ : ಪುಟ್ಟ ಹಳ್ಳಿಯಲ್ಲಿ ಅಪ್ಪ ಅಮ್ಮ ಹೊಲದಲ್ಲಿ ಹಸು ನೋಡಿಕೊಳ್ಳುತ್ತ ಕೃಷಿಯಲ್ಲಿ ತೊಡಗಿದ್ದರೆ, ಅತ್ತ ಮಗ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡುತ್ತಿದ್ದ. ಹೌದು, ಇಂತಹ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ರಿಪ್ಪನ್ ಪೇಟೆಯ ಸಮೀಪದ ಹೊಸಮನೆಯ ಕೃಷಿಕ ದಂಪತಿಗಳಾದ ಸರಸ್ವತಿ ಮತ್ತು ಮಂಜುನಾಥ್ ರವರ ಪುತ್ರ ಮಧುಸೂದನ್ ಎಂ. ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಈ ಹಳ್ಳಿಯ ಪ್ರತಿಭೆ ಬರೋಬ್ಬರಿ ಮೂರು ಚಿನ್ನದ ಪದಕಗಳನ್ನು ಬಾಚಿದ್ದಾನೆ. ಬೆಂಗಳೂರು…