ನಿನ್ನೆ ಆರತಕ್ಷತೆಯಲ್ಲಿ ಊಟ ಮಾಡಿದವರು ಇಂದು ಆಸ್ಪತ್ರೆಗೆ ದಾಖಲು : ಸುಮಾರು 150 ಕ್ಕೂ ಹೆಚ್ಚು ಜನರು ಅಸ್ವಸ್ಥ , ಎಲ್ಲಿ ಗೊತ್ತಾ ??
ಶಿವಮೊಗ್ಗ : ಇಲ್ಲಿನ ಸಮೀಪದ ಹರಮಘಟ್ಟದ ಆಲದಹಳ್ಳಿಯಲ್ಲಿ ನಿನ್ನೆ ಮದುವೆಯೊಂದರ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಸುಮಾರು 60 ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯಿಸನ್ ಆಗಿದ್ದು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ 21 ಜನ ದಾಖಲಾಗಿದ್ದಾರೆ. ನಿನ್ನೆ ಆಲದಹಳ್ಳಿ ದೊಡ್ಡೇರಿ ಕುಟುಂಬದವರ ಎರಡು ಜೋಡಿ ಮದುವೆಯ ಆರತಕ್ಷತೆಗೆ ಹಾಜರಾದ ಹರಮಘಟ್ಟ ಮತ್ತು ಆಲದಹಳ್ಳಿ ಗ್ರಾಮಸ್ಥರು ನಿನ್ನೆ ರಾತ್ರಿ ಊಟ ಮಾಡಿದ್ದಾರೆ.ಮರುದಿನ ಮಧ್ಯಾಹ್ನದಿಂದ ರಿಯಾಕ್ಷನ್ ಆಗಲು ಆರಂಭವಾಗಿದೆ.ಕೆಲ ಗ್ರಾಮಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಹೊಳೆಹೊನ್ನೂರು…