46 ವರ್ಷಕ್ಕೆ ಪವರ್ ಸ್ಟಾರ್ ಅಪ್ಪು ಅವರು ಈ ಲೋಕ ಬಿಟ್ಟು ಹೋದ್ರು ಅನ್ನೋದನ್ನ ಇನ್ನು ನಂಬೋದಕ್ಕೆ ಸಾಧ್ಯ ಆಗ್ತಾ ಇಲ್ಲ. ಪುನೀತ್ ಅವರು ಇದ್ದಾಗ ಅವರನ್ನು ಒಬ್ಬ ನಟನಾಗಿ ಎಲ್ಲರೂ ಇಷ್ಟಪಟ್ಟರು. ಆದರೆ ಪುನೀತ್ ಅವರು ಇಲ್ಲವಾದ ನಂತರ ಅವರು ಮಾಡಿದ್ದ ಎಲ್ಲಾ ಸಮಾಜದ ಕಾರ್ಯಗಳು ಹೊರಬರುತ್ತಿದೆ. ಇಂತಹ ಅದ್ಭುತವಾದ ವ್ಯಕ್ತಿಯನ್ನ ನಾವೆಲ್ರು ಕಳೆದುಕೊಂಡಿದ್ದೇವೆ ಎನ್ನುವ ನೋವು ಇಡೀ ರಾಜ್ಯದ ಜನರಲ್ಲಿದೆ..
ಪುನೀತ್ ಅವರು ಇಲ್ಲವಾಗಿರುವುದು ಅಭಿಮಾನಿಗಳಿಗೆ ಬಹಳ ನೋವು ನೀಡಿರುವುದು ನಿಜ. ಆದರೆ ಇದರಿಂದ ನೋವು ಅನುಭವಿಸುತ್ತಿರುವುದು ಅವರ ಕುಟುಂಬ. ಶಿವಣ್ಣ ರಾಘಣ್ಣ ಅವರೆಲ್ಲರ ಕುಟುಂಬವು ಪುನೀತ್ ಅವರನ್ನು ಕಳೆದುಕೊಂಡು ಬಹಳ ನೋವಿನಲ್ಲಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚು ನೋವಿನಲ್ಲಿರುವುದು ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಮಕ್ಕಳಾದ ಧೃತಿ ಹಾಗೂ ವಂದಿತಾ.
ಎಲ್ಲದಕ್ಕೂ ಸಪೋರ್ಟ್ ಮಾಡುತ್ತಿದ್ದ ತಂದೆ, ಅಷ್ಟು ಪ್ರೀತಿಸಿ ಮದುವೆಯಾದ ಗoಡನನ್ನು ಕಳೆದುಕೊಂಡು, ಅಶ್ವಿನಿ ಮತ್ತು ಮಕ್ಕಳ ದುಃಖ ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಸಹ ಕಷ್ಟ. 46 ವರ್ಷಕ್ಕಾ ಪುನೀತ್ ಅವರಿಗೆ ಈ ರೀತಿ ಆದಾಗ ಇಡೀ ಕುಟುಂಬ ನೋವಿನಲ್ಲಿತ್ತು. ಆದರೆ ಯಾರೂ ಕೂಡ ಅದನ್ನು ಹೆಚ್ಚಾಗಿ ತೋರ್ಪಡಿಸಿಕೊಳ್ಳಲಿಲ್ಲ. ಈ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರ ಮಗಳು ಧೃತಿ ಅವರ ಬಗ್ಗೆ ಸಾಕಷ್ಟು ಚರ್ಚೆಯಾಯಿತು.
ಧೃತಿ ಅಮೆರಿಕಾದಲ್ಲಿ ಓಡುತ್ತಿರುವ ವಿಚಾರ ಎಲ್ಲರಿಗು ಗೊತ್ತಿತ್ತು. ತಂದೆಗೆ ಈ ರೀತಿ ಆಗಿರುವ ವಿಷಯ ಗೊತ್ತಾದ ತಕ್ಷಣವೇ ಅವರು ಅಲ್ಲಿಂದ ಹೊರಟು 24 ಗಂಟೆಗಳ ಪ್ರಯಾಣ ಮಾಡಿ ಬಂದರು. ಧೃತಿ ಅವರು ಬಂದಾಗ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎಂದು ನೋಡಲು ಇಡೀ ರಾಜ್ಯ ಕಾದಿತ್ತು. ಸಾಮಾನ್ಯವಾಗಿ ವಿದೇಶದಿಂದ ಮಕ್ಕಳು ಬರುವಾಗ, ತಂದೆ ತಾಯಿ ಜೊತೆ ಹಚ್ಚಿನ ಸಮಯ ಕಳೆಯಬೇಕು, ತಂದೆ ತಾಯಿ ಜೊತೆ ಮಾತನಾಡಬೇಕು ಎನ್ನುವ ಆಸೆಯಿಂದ ಬರುತ್ತಾರೆ.
ಆದರೆ ಧೃತಿ ಅವರ ಪರಿಸ್ಥಿತಿ ಬೇರೆಯೇ ಆಗಿತ್ತು. ಬಂದ ಒಡನೇ ತಂದೆಯವರ ಪಾರ್ಥಿವ ಶರೀರ ನೋಡಬೇಕಿತ್ತು. ತಂದೆ ಅವರನ್ನು ನೋಡಿ ಧೃತಿ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಾರೆ ಎಂದು ಎಲ್ಲರೂ ಅಂದುಕೊಂಡರು. ಆದರೆ ಧೃತಿ ಅವರು ಆ ರೀತಿ ಮಾಡಲಿಲ್ಲ. ಬಹಳ ಸಂಯಮದಿಂದ ವರ್ತಿಸಿದರು. ಬಂದು, ತಂದೆಯವರನ್ನು ಹತ್ತಿರದಿಂದ ನೋಡಿ, ಹಣೆಯನ್ನು ನೇವರಿಸಿ ದುಃಖವನ್ನು ತಡೆದುಕೊಂಡರು. ಧೃತಿ ಅವರು ಅತ್ತರು, ತಾಯಿಯನ್ನು ಅಪ್ಕೊಂಡು ಇಬ್ಬರು ಮಕ್ಕಳು ಸಹ ಕಣ್ಣೀರು ಹಾಕಿದರು.
ಆದರೆ ಧೃತಿ ಅವರು ಜೋರಾಗಿ ಬಿಕ್ಕಿ ಬಿಕ್ಕಿ ಅಳುವುದು ಪಾ’ರ್ಥಿವ ಶ-ರೀರದ ಮುಂದೆ ಹೊ’ರಳಾಡುವುದು ಈ ರೀತಿ ಏನನ್ನು ಮಾಡಲಿಲ್ಲ. ಇದಕ್ಕೆ ಹಲವು ಜನರು ಟೀಕೆ ಮಾಡಿದರು. ಮಗಳು ಅಳಲಿಲ್ಲ ಎಂದೆಲ್ಲಾ ಹೇಳಿದರು. ಧೃತಿ ಆ ರೀತಿ ಮಾಡಿದ್ದಕ್ಕೂ ಕಾರಣಗಳಿವೆ. ಮೊದಲಿಗೆ ಇಡೀ ರಾಜ್ಯದ ದೃಷ್ಟಿ ಧೃತಿ ಮೇಲಿತ್ತು. ಪುನೀತ್ ಮಗಳು ದೆಹಲಿಗೆ ಬಂದರು, ಬೆಂಗಳೂರಿಗೆ ಬಂದರು ಎಂದು ಪ್ರತಿ ವಿಷಯವು ಸುದ್ದಿಯಾಗುತ್ತಿತ್ತು.
ಅಂತಹ ಸಮಯದಲ್ಲಿ ಧೃತಿ ಬಹಳ ಪ್ರಭುದ್ಧತೆಯಿಂದ ವರ್ತನೆ ಮಾಡಬೇಲಕಿತ್ತು. ಆಕೆ ಆ ರೀತಿಯೇ ನಡೆದುಕೊಂಡರು. ಜೊತೆಗೆ ಯಾರಿಗೆ ಆದರೂ ಕುಟುಂಬದಲ್ಲಿ ಈ ರೀತಿ ಆದಾಗ ತಕ್ಷಣಕ್ಕೆ ನೋವು ಗೊತ್ತಾಗುವುದಿಲ್ಲ. ಆ ಘಟನೆ ಆಗಿ ನಾಲ್ಕೈದು ದಿನ ಕಳೆದ ನಂತರ ಅವರು ಇರುತ್ತಿದ್ದ ಜಾಗ, ನೆನಪುಗಳು ಎಲ್ಲವನ್ನು ನೋಡಿ ದುಃಖ ಉಮ್ಮಳಿಸಿ ಬರಲು ಶುರುವಾಗುತ್ತದೆ. ನೋಡಿದ ತಕ್ಷಣವೇ ಬಿಕ್ಕಿ ಬಿಕ್ಕಿ ಅಳುವುದು ಅದೆಲ್ಲವೂ ತೋರ್ಪಡಿಕೆಗೆ ಮಾಡಿದಂತೆ ತೋರುತ್ತದೆ. ಹಾಗೆಯೇ ಆ ಸಮಯದಲ್ಲಿ ಪ್ರಭುದ್ಧತೆಯಿಂದ ವರ್ತಿಸುವುದೇ ಒಳ್ಳೆಯ ನಿರ್ಧಾರವಾಗಿತ್ತು.
ಪುನೀತ್ ಅವರು ಅಂತಹ ಸಂಸ್ಕಾರವನ್ನು ಮಗಳಿಗೆ ಕಲಿಸಿದ್ದರು. ಆ ಸಮಯದಲ್ಲಿ ರಾಘಣ್ಣ ಅವರು ಸಹ ಎಷ್ಟೇ ದುಃಖವಾದರು ತೋರಿಸಿಕೊಳ್ಳಲಿಲ್ಲ, ಅಶ್ವಿನಿ ಅವರು ಸಹ ನೋವು ಬಹಳ ಇದ್ದರು, ಸೈಲೆಂಟ್ ಆಗಿಯೇ ಕಣ್ಣೀರು ಹಾಕುತ್ತಿದ್ದರು. ಶಿವಣ್ಣ ಸಹ ಎಲ್ಲವನ್ನು ತಡೆದುಕೊಂಡಿದ್ದರು, ಆದರೆ ಕೊನೆಯ ಕ್ಷಣದಲ್ಲಿ ತಡೆಯಲಾಗದೆ ತಮ್ಮನ ಮುಂದೆ ಕುಳಿತು ಅಳಲು ಶುರು ಮಾಡಿದರು.
ಮಕ್ಕಳು ಸಹ ಅದೇ ರೀತಿ ಸಂಸ್ಕಾರದಿಂದ ವರ್ತಿಸಿದ್ದಾರೆ. ಕೆಲವು ಜನರು ಟೀಕೆ ಮಾಡಿದರು ಸಹ ಇದು ನಿಜಕ್ಕೂ ಮೆಚ್ಚಬೇಕಾದ ವಿಷಯ. ದೊಡ್ಮನೆಯ ಸಂಸ್ಕಾರ ಧೃತಿ ಅವರಲ್ಲಿದೆ. ಆ ದಿನದ ಜೊತೆಗೆ ಪುನೀತ್ ಅವರ ಹಾಲು ತುಪ್ಪದ ದಿನ ಧೃತಿ ಧರಿಸಿದ್ದ ಬಟ್ಟೆ ಬಗ್ಗೆ ಸಹ ಹಲವು ಚರ್ಚೆಗಳಾಗಿದ್ದವು. ಧೃತಿ ತಂದೆ ತಾಯಿ ಜೊತೆ ಇಷ್ಟು ವರ್ಷಗಳ ಕಾಲ ಇದ್ದು, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋದರು, ಅದು ಸ್ಕಾಲರ್ಶಿಪ್ ಪಡೆದು, ತಂದೆ ತಾಯಿಯ ಹಣದಿಂದಲ್ಲ.
ಪುನೀತ್ ಅವರು ಹಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು. ಹೆಣ್ಣುಮಕ್ಕಳು ಸ್ವಾವಲಂಬಿಯಾಗಿರಬೇಕು, ಅವರ ಕಾಲ ಮೇಲೆ ಅವರು ನಿಂತುಕೊಳ್ಳಬೇಕು, ನಾನು ಅನಾವಶ್ಯಕವಾಗಿ ಮಕ್ಕಳಿಗೆ ಹಣ ಕೊಡುವುದಿಲ್ಲ ಎಂದು ಪುನೀತ್ ಅವರು ಹೇಳುತ್ತಿದ್ದರು. ಅದೇ ರೀತಿ ಮಗಳು ಧೃತಿ ಸಹ ಇದ್ದರು. ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಎನ್ನುವ ದಾರಿ ಧೃತಿ ಅವರದ್ದು.
ಓದಿನ ಜೊತೆಗೆ ತಂದೆಯ ಹಾಗೆ ಧೃತಿ ಸಹ ಸಮಾಜ ಸೇವೆ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ಇದರ ಬಗ್ಗೆ ಕೆಲವು ವಿಚಾರಗಳು ಕೆಲವು ತಿಂಗಳುಗಳ ಹಿಂದೆ ಮಾಧ್ಯಮದಲ್ಲಿ ಸುದ್ದಿಯಾಗಿದ್ದವು. ಧೃತಿ ಕೆಲವು ಅಂಧರನ್ನು ದತ್ತು ಪಡೆದಿದ್ದಾರೆ, ಅಂದರೆ ಅವರನ್ನು ದತ್ತು ಪಡೆದು, ಇಂತಿಷ್ಟು ದಿನಗಳ ಅಥವಾ ವರ್ಷಗಳ ಕಾಲ ಅವರನ್ನು ನೋಡಿಕೊಳ್ಳಲು ಸಂಪೂರ್ಣ ಹಣ ಸಹಾಯ ಮಾಡುತ್ತಿದ್ದಾರೆ. ತಂದೆಯ ದಾರಿಯಲ್ಲೇ ಮಗಳು ಧೃತಿ ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ