ತೀರ್ಥಹಳ್ಳಿ : ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೋವಿಡ್ ಸಮಯದಲ್ಲಿ ವಹಿಸಿದ ಸೂಕ್ತ ಮುನ್ನೆಚ್ಚರಿಕೆ ಹಾಗೂ ವ್ಯಾಕ್ಸಿನ್ ನೀಡಿಕೆಯ ವೇಳೆಯಲ್ಲಿ ಮಾಡಿದ ಪ್ರಾಮಾಣಿಕ ಸೇವೆಯಿಂದ ದೇಶ ಇಂದು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡು ಮತ್ತೆ ಜನಜೀವನ ಚುರುಕುಗೊಂಡಿದೆ. 100 ಕೋಟಿಗೂ ಅಧಿಕ ಲಸಿಕೆ ನೀಡಿ ಭಾರತವು ವಿಶ್ವ ದಾಖಲೆ ಬರೆಯುವಲ್ಲಿ ಇವರ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ವತಿಯಿಂದ ಆರೋಗ್ಯ ಅಧಿಕಾರಿಗಳಿಗೆ ಮತ್ತು ಅಲ್ಲಿಯ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಿ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ರಕ್ಷಿತ್ ಮೇಗರವಳ್ಳಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಗರ್ ಹುಕುಂ ಕಮಿಟಿ ಸದಸ್ಯರಾದ ಚಕ್ಕೋಡ್ ಬೈಲು ರಾಘವೇಂದ್ರ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂದನ್ ಹಸಿರುಮನೆ, ತಾ.ಪಂ. ಮಾಜಿ ಉಪಾಧ್ಯಕ್ಷೆ ಯಶೋಧ ಮಂಜುನಾಥ್, ಮೇಗರವಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಪ್ರತಿಮಾ ಪುಟ್ಟಪ್ಪ, ನಾಲೂರು ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ವಾಸಪ್ಪ, ಹೆಗ್ಗೋಡು ಗ್ರಾಮಪಂಚಾಯತ್ ಅಧ್ಯಕ್ಷ ಪ್ರದೀಪ ಗುಡ್ಡೆಕೊಪ್ಪ, ಗ್ರಾಮಪಂಚಾಯತ್ ಸದಸ್ಯರಾದ ನವೀನ್ ಮೇಗರವಳ್ಳಿ, ಮೋಹನ್ ನಾಲೂರು, ಕೃಷ್ಣಮೂರ್ತಿ ಬಡಗಬೈಲು,ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಅಧ್ಯಕ್ಷ ಅಂಬರೀಶ್ ಮಳಲಿ, ಅಭಿಲಾಶ್ ಕೈಮರ,ಮಹೇಶ್ ಮುಡುವಳ್ಳಿ ಹಾಗೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಭಾಗಿಯಾದರು.
ವರದಿ: ಪ್ರಶಾಂತ್ ಮೇಗರವಳ್ಳಿ