w
Headlines
Home » ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಭೀಕರ ಅಪಘಾತ : ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಸ್ಥಳದಲ್ಲೆ ಸಾವು

ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಭೀಕರ ಅಪಘಾತ : ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಸ್ಥಳದಲ್ಲೆ ಸಾವು

ಶಿವಮೊಗ್ಗ : ಇಲ್ಲಿನ ಸಮೀಪದ ಮುದ್ದಿನ ಕೊಪ್ಪದ ಬಳಿ ಬೊಲೆರೋ ಗೂಡ್ಸ್ ವಾಹನವೊಂದು ರಸ್ತೆ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ ಹೊಡೆದು ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಸ್ಥಳದಲ್ಲೆ ಮೃತ ಪಟ್ಟಿದ್ದು ಬೈಕ್ ಸವಾರನ ಕಾಲು ಮುರಿದಿದೆ.


ಈ ಅಪಘಾತದಲ್ಲಿ ರಸೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಸ್ಥಳದಲ್ಲಿಯೇ ಸಾವುಕಂಡಿದ್ದು, ದ್ವಿಚಕ್ರ ವಾಹನ ಸವಾರನಿಗೆ ಕಾಲು ಮುರಿದಿದೆ.
 ಮೃತಪಟ್ಟ ಕಾರ್ಮಿಕನನ್ನು ಚಂದ್ರಶೇಖರ್ ಎಂದು, ಅಪಘಾತದಲ್ಲಿ ಕಾಲುಮುರಿದುಕೊಂಡ ದ್ವಿಚಕ್ರ ವಾಹನ ಸವಾರ ಪೆರುಮಾಳ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ : 

ಮುದ್ದಿನಕೊಪ್ಪ ರಸ್ತೆಯ ಬಳಿ ರಸ್ತೆಕಾಮಗಾರಿ  ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ರಸ್ತೆ ದಾಟುವಾಗ ಶಿವಮೊಗ್ಗದಿಂದ ಆಯನೂರು ಕಡೆ ಹೋಗುತ್ತಿದ್ದ ಬುಲೆರೋ ಗೂಡ್ಸ್ ವಾಹನ ಅತಿವೇಗದಲ್ಲಿ ಬಂದ ಕಾರಣ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿ ಹೊಡೆದ ನಂತರ ಬುಲೆರೋ ವಾಹನವನ್ನ ಚಾಲಕ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಆಯನೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಟಿವಿಎಸ್ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಪೆರುಮಾಳ್ ಗೆ ಕಾಲು ಮುರಿದಿದೆ.ನಂತರ ಬಲಭಾಗದಲ್ಲಿ ವಾಹನ ಪಲ್ಟಿ ಹೊಡೆದು ನಿಂತಿದೆ.ಬುಲೆರೋ ವಾಹನದಲ್ಲಿರುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಈತನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.