ಶಿವಮೊಗ್ಗ : ಚುನಾವಣೆಯಲ್ಲಿ ಮತ ಪಡೆಯಲು ಬಿಜೆಪಿ ಕವರ್ ಹಂಚಿದೆ ಎಂಬ ಡಿಕೆಶಿ ಆರೋಪಕ್ಕೆ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಬಿಜೆಪಿ ಕವರ್ ನೀಡಿದರೆ ಕಾಂಗ್ರೆಸ್ ನೇರವಾಗಿ ಹಣ ನೀಡಿದೆ ಎಂದು ಹೇಳುವ ಮೂಲಕ ಸಚಿವರು ಅಚ್ಚರಿ ಮೂಡಿಸಿದ್ದಾರೆ.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ನವರು ಬಿಜೆಪಿ ಕವರ್ ನೀಡಿ ಚುನಾವಣೆ ಗೆಲ್ಲಲು ತಂತ್ರಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದೆ. ನಾವು ಕವರ್ ನಲ್ಲಿ ಕೊಟ್ಟರೆ ಕಾಂಗ್ರೆಸ್ ನೇರವಾಗಿ ಹಣ ಹಂಚುತ್ತಿದೆ ಎಂದು ತಿರುಗೇಟು ನೀಡಿದರು.
ನಾವು ಕದ್ದುಮುಚ್ಚಿ ಹಣ ಹಂಚುತ್ತಿದ್ದೇವೆ ಎಂಬುದು ಅವರ ಲೆಕ್ಕ, ಆದರೆ ಕಾಂಗ್ರೆಸ್ ನೇರವಾಗಿ ಹಣ ಹಂಚುತ್ತಿದೆ ಎಂದು ಹೇಳುತ್ತಿದೆ. ಇದಕ್ಕೆ ಡಿಕೆಶಿ ಏನು ಉತ್ತರಿಸುತ್ತಾರೆ ಎಂದು ಪ್ರಶ್ನಿಸಿದ ಸಚಿವರು ಎಲ್ಲಾ ತಂತ್ರಗಾರಿಕೆಯನ್ನ ಮೂರು ಪಕ್ಷದವರು ಮಾಡುತ್ತಿವೆ. ಪಕ್ಷಗಳು ಪರಸ್ಪರ ಹಣ ಹಂಚಿಕೆಯ ಆರೋಪಗಳು, ಜಾತಿ ಆರೋಪಗಳು ತೋರಿಕೆಗೆ ಹೇಳುವಂತಹ ಪದಗಳು ಎಂದು ನೇರವಾಗಿ ಹೇಳಿದರು.
ಸಂಘಟನೆ, ಅಭಿವೃದ್ಧಿ ಮತ್ತು ನಾಯಕತ್ವದ ಅಡಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಎರಡೂ ಉಪಚುನಾವಣೆಯನ್ನ ಗೆಲ್ಲಲಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಬಿಜೆಪಿಗೆ ಬೂತ್ ಮತ್ತು ಪೇಜ್ ಮಟ್ಟದ ಕಾರ್ಯಕರ್ತರಿದ್ದಾರೆ. ಎರಡೂ ಕ್ಷೇತ್ರದಲ್ಲಿಯೂ ಇಂತಹ ಕಾರ್ಯಕರ್ತರ ಮೂಲಕ ಮತ ಕೇಳಲು ಸಾಧ್ಯವಾಗಿದೆ. ಇದರ ಜೊತೆಗೆ ಪ್ರಧಾನಿ ಮೋದಿ ಹೆಸರಿನ ಬಲ ಪಕ್ಷಕ್ಕೆ ಮತ್ತು ಅಭ್ಯರ್ಥಿಗೆ ಇದೆ. ಹಾಗಾಗಿ ಮೂರು ಅಂಶದ ಮೇಲೆ ಬಿಜೆಪಿಯ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದರು.
ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯಲ್ಲಿ ಜನ ಅಭಿವೃದ್ಧಿ ನೋಡಿ ಮತಹಾಕುತ್ತಾರೆ. ಬಿಎಸ್ ವೈ ಮಾಡಿದಂತಹ ಅಭಿವೃದ್ಧಿ ಮತ್ತು ಈಗಿನ ಸಿಎಂ ಬೊಮ್ನಾಯಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನ ನೋಡಿ ಜನ ಮತಹಾಕಲಿದ್ದಾರೆ ಎಂದರು.