ರಿಪ್ಪನ್ ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ಕಾಡಾನೆಯ ಹಾವಳಿ : ಅಡಿಕೆ ತೋಟಕ್ಕೆ ಹಾನಿ

ರಿಪ್ಪನ್ ಪೇಟೆ : ಮೂಗೂಡ್ತಿ ಅರಣ್ಯ ಜೀವಿ ವಲಯ ವ್ಯಾಪ್ತಿಯ ತಳಲೆ ಗ್ರಾಮದ ಕಾರೆಹೊಂಡ ದಲ್ಲಿರುವ ರೈತರ ಅಡಿಕೆ ತೋಟಕ್ಕೆ ಮಂಗಳವಾರ ರಾತ್ರಿ ಆನೆಯೊಂದು ದಾಳಿ ನಡೆಸಿ ಅಡಿಕೆ ತೋಟ ಹಾನಿಗೊಳಿಸಿದ ಘಟನೆ ನಡೆದಿದೆ.


ರೈತ ಪರಶುರಾಮ ಎಂಬವರ ಅಡಿಕೆ ತೋಟಕ್ಕೆ ದಾಳಿ ಮಾಡಿದ ಆನೆಯು ತೆಂಗು ಹಾಗೂ ಅಡಿಕೆ ಮರಗಳನ್ನು ಕಿತ್ತು ಮುರಿದು ಹಾನಿಗೊಳಿಸಿ ರೈತರಿಗೆ ನಷ್ಟವನ್ನುಂಟು ಮಾಡಿದೆ.ಅನಾಹುತದ ಘಟನೆಯನ್ನು ತಿಳಿದ ಗ್ರಾಮಸ್ಥರು ತೋಟಕ್ಕೆ ಆಗಮಿಸಿ ಇದುವರೆಗೆ ಈ ಭಾಗದಲ್ಲಿ ಆನೆ ಬಂದಿರುವ ನಿದರ್ಶನ ಇರಲಿಲ್ಲ ಆದರೆ ಈಗ ಏಕಾಏಕಿ ರಾತ್ರಿ ವೇಳೆಯಲ್ಲಿ ರೈತರ ಜಮೀನುಗಳಿಗೆ ದಾರಿ ಹಿಡಿದಿರುವುದು ಭಯವುಂಟು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಥಳಕ್ಕೆ ಅರಣ್ಯಾಧಿಕಾರಿ ರಾಜ ಅಹ್ಮದ್ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲಿಸಿ ಆನೆ ಬಂದಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ರೈತರು ಹೊಲಗದ್ದೆಗಳಿಗೆ ತೆರಳುವಾಗ ಮುಂಜಾಗ್ರತೆ ವಹಿಸುವುದು ಸೂಕ್ತ ಒಂದೆರಡು ದಿನಗಳಲ್ಲಿ ಆನೆಯ ಚಲನವಲನವನ್ನು ಗಮನಿಸಿ ಮುಂದಿನ  ಕ್ರಮ ಜರುಗಿಸಲಾಗುವುದು ಎಂದರು.


ಈ ಪ್ರದೇಶದಲ್ಲಿ ಕಾಡಾನೆ ಓಡಾಟದ ಬಗ್ಗೆ ಮಾಹಿತಿ ಇರಲಿಲ್ಲ ಇದೇ ಮೊದಲು ಆನೆ ದಾಳಿ ಘಟನೆ ನಡೆದಿದೆ ತಿಳಿದುಬಂದಿದೆ ರೈತರು ಮತ್ತು ಸಾರ್ವಜನಿಕರು ಹೊಲಗದ್ದೆಗಳಿಗೆ ಅರಣ್ಯ ಪ್ರದೇಶದ  ಎಚ್ಚರಿಕೆ ವಹಿಸಬೇಕು ಮತ್ತು ಮತ್ತೆ ಆನೆ ಕಾಣಿಸಿಕೊಂಡರೆ ತಕ್ಷಣ ಇಲಾಖೆ ಮಾಹಿತಿ ತಿಳಿಸಿ ಎಂದು ಮೂಗೂಡ್ತಿ ವನ್ಯಜೀವಿ ವಲಯದ RFO ಅಫ್ರಿನಾಜ಼್ ಶುಂಠಿ ಹೇಳಿದರು.

Leave a Reply

Your email address will not be published. Required fields are marked *