ಕಾರಿಗೆ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಚಾನೆಲ್ ಗೆ ಇಳಿದ ಕಾರು : ಒಬ್ಬರ ಸಾವು
ಕಾರಿಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ತುಂಗಾ ಚಾನೆಲ್ ಗೆ ಕಾರು ಬಿದ್ದು ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ 2 ಗಂಟೆಯ ಸಮಯದಲ್ಲಿ ಸಂಭವಿಸಿದೆ. ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮ.ಇ(28) ಮೃತ ದುರ್ಧೈವಿ. ಸುಷ್ಮ ಮತ್ತು ಪತಿ ಚೇತನ್ ಕುಮಾರ್ ತುಮಕೂರಿನಲ್ಲಿರುವ ಅತ್ತೆಗೆ (ಚೇತನ್ ತಾಯಿಗೆ) ಎದೆ ನೋವು ಕಾಣಿಸಿಕೊಂಡಿದ್ದರಿಂದ ತುಮಕೂರಿಗೆ ಕಾರಿನಲ್ಲಿ…


