ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಮುಸ್ಲಿಂ ಮುಖಂಡರೇ ನಿರ್ಧರಿಸಲಿ: ಸಚಿವ ಕೆ ಎಸ್ ಈಶ್ವರಪ್ಪ
ಮಸೀದಿಯಲ್ಲಿ ಧ್ವನಿವರ್ಧಕ ತೆಗೆಸದಿದ್ದರೆ ನಾವೂ ಹನುಮಾನ್ ಚಾಳೀಸ್ ಕೇಳಿಸುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗೆ ಬೇಕಾ ಬಿಟ್ಟಿ ಹೇಳುವದರಿಂದ ಕೋಮು ಸಂಘರ್ಷವಾಗಬಹುದು. ಧ್ವನಿವರ್ಧಕ ಬಳಸುವ ಬಗ್ಗೆ ಮುಸ್ಲಿಂ ಮುಖಂಡರೇ ನಿರ್ಧರಿಸಬೇಕು. ದೇವಸ್ಥಾನಗಳಲ್ಲಿ, ಚರ್ಚ್‌ಗಳಲ್ಲಿ ನಡೆಯುವ ರೀತಿ ಬೇರೆಯವರಿಗೆ ತೊಂದರೆಯಾಗದಂತೆ ಮಸೀದಿಯೊಳಗೇ ಧ್ವನಿವರ್ಧಕ ಬಳಸುವುದು ಸೂಕ್ತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಕಾಂಗ್ರೆಸ್ ನವರು ಅಲ್ಲಾಹುವನ್ನು ಮರೆತರು. ಏಸುಕ್ರಿಸ್ತನನ್ನೂ ಮರೆತರು. ಬುದ್ಧ, ಬಸವ, ಅಂಬೇಡ್ಕರ್ ನೆಪ ಶುರು ಮಾಡಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು…


