Headlines

ಗೋಡೆ ಕೊರೆದು ಚಿನ್ನದ ಅಂಗಡಿಯಿಂದ 1 ಕೋಟಿ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು : ಎಲ್ಲಿ ಗೊತ್ತಾ??? ಈ ಸುದ್ದಿ ನೋಡಿ

ಭದ್ರಾವತಿ ನಗರದ ಸರ್ಕಾರಿ ಆಸ್ಪತ್ರೆ ಸಮೀಪ ಇರುವ ಎಸ್​ಎಸ್​ ಜ್ಯುವೆಲರ್ಸ್​ನಲ್ಲಿ ಸುಮಾರು 1ಕೋಟಿ 34 ಲಕ್ಷ 73 ಸಾವಿರ ರೂ  ಮೌಲ್ಯದ ಚಿನ್ನ,ಬೆಳ್ಳಿ,ಹಾಗೂ ನಗದು ಕಳ್ಳತನವಾಗಿದೆ.ಶನಿವಾರ ರಾತ್ರಿ ಈ ಘಟನೆ ನಡೆದಿದೆ. 



ಎಸ್ ಎಸ್ ಜ್ಯುವೆಲ್ಲರ್ಸ್ ಅಂಗಡಿಯ ಹಿಂಬದಿಯಲ್ಲಿ ಕನ್ಸರ್​ವೆನ್ಸಿ ಇದ್ದು ಅಂಗಡಿಯ ಒಳಭಾಗದಲ್ಲಿ ಮನೆಯ ಮಾದರಿಯಲ್ಲಿದ್ದು, ಅಲ್ಲಿ ಬಳಕೆ ಮಾಡದ ಕೆಲ ರೂಮ್​ಗಳಿತ್ತು.ಕಳೆದೊಂದು ವಾರದಿಂದ ಸಂಪೂರ್ಣವಾಗಿ ವಾಚ್ ಮಾಡಿದ ಕಳ್ಳರು ಹಿಂದಿನ ದಿನ ಕನ್ನ ಹಾಕಲು ಬೇಕಿರುವ ಹ್ಯಾಮರ್​, ಡ್ರಿಲ್ಲರ್​, ರಾಡ್​, ಗ್ಯಾಸ್​ ಕಟ್ಟರ್, ಹೀಗೆ ಟೂಲ್ಸ್​ಗಳನ್ನು ಒಂದು ಕಡೆ ಇಟ್ಟು ಹೋಗಿದ್ದಾರೆ.

 ಶನಿವಾರ ರಾತ್ರಿ ಸ್ಥಳಕ್ಕೆ ಬಂದು ನಿಗದಿಯಂತೆ ಅಂಗಡಿಯ ಹಿಂದುಗಡೆಯಿಂದ ಗೋಡೆಯನ್ನು ಒಡೆದು ಒಳಕ್ಕೆ ಬಂದಿದ್ದಾರೆ. ಅಂಗಡಿಯಲ್ಲಿದ್ದ ಬೀರು ಒಡೆದು ಅದರಲ್ಲಿದ್ದ ಬೆಳ್ಳಿ ಕದ್ದಿದ್ದಾರೆ. ಅದಾದ ನಂತರ ಶೋಕೇಸ್​ನಲ್ಲಿದ್ದ ಚಿನ್ನ, ಕ್ಯಾಶ್​ನಲ್ಲಿದ್ದ ಹಣ, ಹಾಗೂ ಇತರೇ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸುಮಾರು 1ಕೋಟಿ 37 ಲಕ್ಷದ 73 ಸಾವಿರ ಮೌಲ್ಯದ ಚಿನ್ನ,ಬೆಳ್ಳಿ ಮತ್ತು ನಗದು ಕಳ್ಳತನ ಮಾಡಿರುವ ಖತರ್ನಾಕ್ ಕಳ್ಳರ ಪತ್ತೆಗೆ ಭದ್ರಾವತಿ ಪೊಲೀಸರು ಬಲೆ ಬೀಸಿದ್ದಾರೆ.

ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.


About The Author

Leave a Reply

Your email address will not be published. Required fields are marked *

Exit mobile version