ಬಿಎಸ್ ವೈ ಕುರ್ಚಿಗೆ ಪುತ್ರ ವಿಜಯೇಂದ್ರರ ಭ್ರಷ್ಟಾಚಾರವೇ ಮುಳುವಾಯಿತೇ ?!! ಬಿಜೆಪಿಯವರೆ ಉತ್ತರ ನೀಡಬೇಕು:ಬೇಳೂರು ಗೋಪಾಲಕೃಷ್ಣ
ಆನಂದಪುರ: ಸಾಗರ ತಾಲ್ಲೂಕಿನಲ್ಲಿ ಕಳೆದ 1 ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಇದರಿಂದ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಸಾಗರ ತಾಲ್ಲೂಕಿನ ಆನಂದಪುರ ದಲ್ಲಿ ಪ್ರವಾಹ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಆನಂದಪುರಂ ಹೋಬಳಿಯಲ್ಲಿ ಜನರು ಕೋಟ್ಯಂತರ ರೂ ನಷ್ಟಕ್ಕೀಡಾಗಿದ್ದಾರೆ ಎಂದರು. ಮನೆಗಳು ಬಿದ್ದಿವೆ ಕೊಟ್ಟಿಗೆಗಳು ಮುರಿದಿವೆ,ರೈತರ ಬೆಳೆ ಕೂಡ ಹಾಳಾಗಿದೆ ಕೂಡಲೇ ಅಧಿಕಾರಿಗಳು ಹಾಗೂ ಸರಕಾರ ಸಂತ್ರಸ್ತರ ನೆರವಿಗೆ ಬರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ…