ಈಡೇರಿದ ತೀರ್ಥಹಳ್ಳಿ ಜನತೆಯ ಬಹುದಿನಗಳ ಕನಸು :ಸಚಿವರಾಗಿ ಆರಗ ಜ್ಞಾನೇಂದ್ರ ಇಂದು ಪ್ರಮಾಣ ವಚನ ಸ್ವೀಕಾರ
ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರರಿಗೆ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ದೊರೆತಿದ್ದು ಇಂದು ಮಧ್ಯಾಹ್ನ 2.15 ಕ್ಕೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವಿಷಯವನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುವಾಗ ಜ್ಞಾನೇಂದ್ರ ರವರು ತುಂಬಾ ಭಾವುಕರಾಗಿದ್ದರು.ಸಚಿವ ಸ್ಥಾನಕ್ಕಾಗಿ ಯಾವುದೇ ಲಾಭಿ ಮಾಡದ ಜನನಾಯಕನಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಇದೇ ಮೊದಲ ಬಾರಿಗೆ ಸಚಿವರಾಗಿ ಅರಗ ಜ್ಞಾನೇಂದ್ರರವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿ 4 ಬಾರಿ…