ರಿಪ್ಪನ್‌ಪೇಟೆ : ದಾನ ಮಾಡುವವರಿಗೆ ಇಂತಹದೇ ಎಂಬ ನಿಯಮವೇನು ಇಲ್ಲ ಯಾವುದಾದರೇನು ಕೊಡುವ ಮನಸ್ಸು ಇದ್ದರೆ ಏನು ಬೇಕಾದರೂ ಕೊಡಬಹುದು ಎಂಬುದಕ್ಕೆ ಇಲ್ಲಿನ ಶಬರೀಶ್ ನಗರದ ನಿವಾಸಿ ಕುಮಾರಿ ಚಂದನ ಜಿ.ನಾಯಕ್ ಮಾದರಿಯಾಗಿದ್ದಾಳೆ.
ಕಣ್ಣು-ರಕ್ತ – ವಸ್ತ-ಅನ್ನದಾನ-ವಿದ್ಯಾದಾನ ಗೋ ದಾನ, ಧನ ದಾನ ಹೀಗೆ ಹತ್ತು ಹಲವು ವಿಧದಲ್ಲಿ ದಾನ ಮಾಡುವುದನ್ನು ನಾವು ಕೇಳಿರುತ್ತೇವೆ ಅದರೆ ಇಲ್ಲಿನ ಯುವತಿಯೊಬ್ಬಳು ತನ್ನ ಕೇಶವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾಳೆ.
ಕ್ಯಾನ್ಸರ್ ರೋಗಿಗಳಿಗೆ ಮಾರಕ ರೋಗದ ವಿರುದ್ದ ಹೋರಾಡಲು ಶಕ್ತಿಯನ್ನು ನೀಡಿದಂತಾಗುತ್ತದೆ ಅಲ್ಲದೆ ಕೂದಲು ಹೋದರೆ ಪುನ: ಬೆಳೆಯತ್ತದೆ ಹಾಗೇ ನಾವು ನೀಡುವ ದೈರ್ಯ ಅವರಿಗೆ ಬದುಕಲು ಸ್ಪೂರ್ತಿ ನೀಡುವಂತಾಗಲಿ ಎಂಬ ಉದ್ದೇಶದಿಂದ ನನ್ನ ಕೇಶವನ್ನು ದಾನ ನೀಡುತ್ತಿರುವುದಾಗಿ ಸಹ್ಯಾದ್ರಿ ಕಾಲೇಜ್‌ನ ಅಂತಿಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿ ಕುಮಾರಿ ಚಂದನ ಜಿ.ನಾಯಕ್ ಹೇಳುತ್ತಾರೆ.
ಮಾಧ್ಯಮದವರೊಂದಿಗೆ ಮಾತನಾಡಿ ಜೀವನ ಎಲ್ಲರಿಗೂ ಸಮನಾಗಿರುವುದಿಲ್ಲ ಕಷ್ಟ ನೋವು ಪ್ರತಿಯೊಬ್ಬರಿಗೂ ಅನೆಕ ರೀತಿಯಲ್ಲಿ ಇರುತ್ತದೆ ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರ ನೋವಿಗೆ ಸ್ಪಂದಿಸುವ ಮೂಲಕ ಅಸರೆಯಾಗಬೇಕು.ಅನಾರೋಗ್ಯದ ಸಂದರ್ಭದಲ್ಲಿ ಹಲವಾರು ರೀತಿಯಲ್ಲಿ ನಮ್ಮ ದೇಹ ಮತ್ತು ಜೀವನ ಬದಲಾಗುತ್ತದೆ.ಅಂತಹ ಹಂತದಲ್ಲಿ ಅದರಲ್ಲೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅತಿ ಹೆಚ್ಚು ನೋವು ನೀಡುವುದು ಕೂದಲು ಉದುರುವಿಕೆ ಅದರಲ್ಲೂ ಮಹಿಳೆಯರಿಗೆ ಇದು ಅತಿಯಾದ ನೋವು ನೀಡುವ ಮತ್ತು ಕುಗಿಸುವ ಹಂತ ಅಂತಹವರಿಗೆ ನಮ್ಮ ಕೂದಲನ್ನು ನೀಡುವುದರ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂದು ದೈರ್ಯ ಸ್ಥರ್ಯ ತುಂಬುವ ಮೂಲಕ ನನ್ನ ನೀಲಕಾಯದ ಕೂದಲನ್ನು ರೋಗಿಗಳಿಗೆ ದಾನವಾಗಿ ನೀಡುತ್ತಿದ್ದೇನೆಂದು ಬಹು ಹರ್ಷದಿಂದ ತನ್ನ ಅಂತರಾಳದ ಮಾತುಗಳನ್ನು ಹಂಚಿಕೊಂಡರು.
ಚಂದನ ರವರ ತಂದೆ ಗಂಗನಾಯಕ್ ರವರು ತಾಲ್ಲೂಕಿನ ತಮ್ಮಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದಾರೆ. ತಾಯಿ ಶೀಲಾ ನಾಯ್ಕ್ ತಾಪಂ ಮಾಜಿ ಸದಸ್ಯರು.
ಇವರ ಪ್ರೇರಣೆ ಪ್ರೋತ್ಸಾಹದಿಂದಾಗಿ ನಾನು ಇಂತಹ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಚಂದನ ಹೇಳಿಕೊಂಡರು.